
ಕಾರವಾರ : ಈ ಅಭಿಯಾನವು ಗ್ರಾಮೀಣ ಪ್ರದೇಶದ ಬಡ ಮತ್ತು ದುರ್ಬಲ ವರ್ಗದ ಕುಟುಂಬದ ಮಹಿಳೆಯರನ್ನು ವಿವಿಧ ಹಂತಗಳ ವಿವಿಧ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಸಂಘಟಿಸಿ ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸುವುದರೊಂದಿಗೆ ಜೀವನಮಟ್ಟ ಉನ್ನತಿಕಿರಿಸುವುದಾಗಿ ಜಿ.ಪಂ. ಯೋಜನಾ ನಿರ್ದೇಶಕರಾದ ಕರೀಂ ಅಸದಿ ತಿಳಿಸಿದರು.

ಸೋಮವಾರ (ದಿ.12-9-2022) ಹಳಿಯಾಳದ ದೇಶಪಾಂಡೆ ಆರ್.ಸೆಟಿಯಲ್ಲಿ ಕೆ.ಎಸ್.ಆರ್.ಎಲ್.ಪಿ.ಎಸ್. ಬೆಂಗಳೂರಿನ ಅಭಿಯಾನ ನಿರ್ದೇಶಕರ ಸಂದೇಶದ ಮೇರೆಗೆ ಅವರು ಐದು ದಿನಗಳ ಕೃಷಿ ಉದ್ಯೋಗ ಸಖಿಯರ ಮತ್ತು ವನ ಸಖಿಯರ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಕೃಷಿ ಪ್ರಧಾನ ದೇಶವಾಗಿರುವುದರಿಂದ ಗ್ರಾಮೀಣ ಪ್ರದೇಶವು ಸಣ್ಣ ಮತ್ತು ಅತಿ ಸಣ್ಣ ರೈತ ಮಹಿಳೆಯರನ್ನು ಗುರುತಿಸಿ ಉತ್ಪಾದಿಸುವ ವಿವಿಧ ಕೃಷಿ ಉತ್ಪನ್ನಗಳ ಮಾಹಿತಿ ಪಡೆದು ಮೌಲ್ಯ ವರ್ಧನೆ, ಮೌಲ್ಯ ಸರಪಳಿಗೊಳಿಸಿ ರೈತರಿಗೆ ಆದಾಯ ಹೆಚ್ಚಿಸುವುದು ಯೋಜನೆಯ ಉದ್ದೇಶವಿರುವುದಾಗಿ ಅವರು ತಿಳಿಸಿದರು.

ರಾಜ್ಯ ಕಾರ್ಯಕ್ರಮ ವ್ಯವಸ್ಥಾಪರಾದ ಮಂಗಳಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಕೃಷಿ ಸರಕುಗಳಾದ ಭತ್ತ, ಅರಿಶಿಣ, ಶುಂಠಿ, ಕೋಳಿ, ಮೀನು, ನರ್ಸರಿ, ಕಿರು ಅರಣ್ಯ ಉತ್ಪನ್ನಗಳ 551 ಉತ್ಪಾದಕ ಗುಂಪುಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸದರಿ ಉತ್ಪಾದಕ ಗುಂಪುಗಳಿಗೆ ಬ್ಯಾಂಕ್ ಸಂಪರ್ಕ ಮೌಲ್ಯ ಸರಪಳಿ, ಮೌಲ್ಯ ವರ್ದನೆ, ವಿವಧ ಇಲಾಖೆಗಳ ಜೊತೆ ಒಗ್ಗೂಡಿಸುವಿಕೆ ಮತ್ತು ಮಾರುಕಟ್ಟೆ ಸಂಪರ್ಕಗೊಳಿಸಲು ಕೃಷಿ ಉದ್ಯೋಗ ಸಖಿ ಮತ್ತು ವನ ಸಖಿಯರಿಗೆ ಐದು (೫) ದಿನಗಳ ತರಬೇತಿ ಇರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಳಿಯಾಳ, ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ನಿರ್ದೇಶಕರು, ಆರ್.ಸೆಟಿ ಹಾಗೂ ಜಿಲ್ಲಾ ಅಭಿಯಾನ ಘಟಕದ ವ್ಯವಸ್ಥಾಪಕರು, ಎನ್.ಆರ್.ಎಲ್.ಎಮ್. ತಾಲೂಕು ಸಿಬ್ಬಂದಿಗಳು ಹಾಜರಿದ್ದರು. ವಿನಾಯಕ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂರ್ವದನಾ ಸಂಸ್ಥೆ, ಜಿಲ್ಲಾ ಪಂಚಾಯತ, ಉತ್ತರ ಕನ್ನಡ ರವರು ತರಬೇತಿ ಆಯೋಜಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಯ್ಕೆಯಾದ ಕೃಷಿ ಉದ್ಯೋಗ ಸಖಿ ಮತ್ತು ವನಸಖಿಯರು ಹಾಜರಿದ್ದರು.