ವಿಶ್ವ ಅಂಚೆ ದಿನ : ಸ್ವಾಸ್ಥ್ಯದ ಕಡೆ ನಡಿಗೆ

Spread the love

ವರದಿ : ಬಸವೇಂದ್ರಯ್ಯ(ಶಶಿಧರ) ಕುಲಕರ್ಣಿ

ಮುಂಡಗೋಡ : ಭಾರತೀಯ ಅಂಚೆ ಇಲಾಖೆಯ ಅಂಚೆ ಸಪ್ತಾಹದ ಅಂಗವಾಗಿ ಇಲ್ಲಿನ ಅಂಚೆ ಇಲಾಖೆ ಸಿಬ್ಬಂದಿ ಪಟ್ಟಣದ ಪ್ರಥಮ ದರ್ಜೆ ಕಾಲೇಜ್ನಲ್ಲಿ ಅಂಚೆ ಇಲಾಖೆಯ ಸೌಲಭ್ಯ ಮಾಹಿತಿ ಶಿಬಿರ ಹಾಗೂ ವಿಶ್ವ ಅಂಚೆ ದಿನ ಹಮ್ಮಿಕೊಂಡಿದ್ದರು.

ಪೋಸ್ಟ್ ಮಾಸ್ಟರ್ ದಿನೇಶ ವೆರ್ಣೇಕರ ಅಂಚೆ ಇಲಾಖೆಯ ಎಲ್ಲ ಸೌಲಭ್ಯಗಳು, ವಿದ್ಯಾರ್ಥಿ ವೇತನ, ಡಿಬಿಟಿ ಸೇವೆಯ ಐಪಿಪಿಬಿ ಡಿಜಿಟಲ್ ಖಾತೆಗಳು, ರಾಷ್ಟ್ರೀಯ ಬ್ಯಾಂಕ್‌ಗಳಿಂದ ಹಣ ವರ್ಗಾವಣೆ, ಅಪಘಾತವಿಮೆ, ಪಿಎಲ್‌ಐ/ಆರ್‌ಪಿಎಲ್‌ಐ ಜೀವ ವಿಮಾ ಪಾಲಿಸಿ, ಆಧಾರ ಅಪ್ಡೇಟ್ ಮತ್ತು ನೋಂದಣಿಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಂಶುಪಾಲೆ ಇಂದಿರಾ ಬಾಗಲಕೋಟೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಮಧು, ಯಲ್ಲಪ್ಪ, ಅಂಚೆ ಸಿಬ್ಬಂದಿ ಸುಮಂತ ಜಡೆ, ಪ್ರಭಾಕರ ಪೂಜಾರ, ರತ್ನಾಕರ ರಾಯ್ಕರ, ಉದಯ ಗಾಂಜೇಕರ, ರಮೇಶ ಲಮಾಣಿ, ಸ್ವಾತಿ ಇಲ್ಲಾಳ, ಸಿದ್ದಪ್ಪ ಹನಮರ, ವಿದ್ಯಾರ್ಥಿಗಳು ಮತ್ತು ಕಾಲೇಜ್ ಸಿಬ್ಬಂದಿ ಉಪಸ್ಥಿತರಿದ್ದರು. ಗುರಿ ಸಾಧಿಸಿದ ಗ್ರಾಮೀಣ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲಾಯಿತು. ಸ್ವಾಸ್ಥ್ಯದ ಕಡೆ ನಡಿಗೆ ಕಾರ್ಯಕ್ರಮದಲ್ಲಿ ಫಿಟ್ ಇಂಡಿಯಾ ಆರೋಗ್ಯಕ್ಕೆ ನಡಿಗೆ ಮೂಲಕ ಅಂಚೆ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹತ್ವ ಸಾರಿದರು.