ಚವಡಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಕೊಂಡುಬಾಯಿ ಗಾವಡೆ ಅವಿರೋಧ ಆಯ್ಕೆ

Spread the love

ಮುಂಡಗೋಡ : ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಂದು ಬ್ಯಾನಳ್ಳಿ ಗ್ರಾಮದ ಕೊಂಡುಬಾಯಿ ವಿಟ್ಟು ಗಾವಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

13 ಸದಸ್ಯರ ಪೈಕಿ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು

ಚುನಾವಣೆ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪ ಬಂಗೇರ ಹಾಗೂ ಕಂದಾಯ ಇಲಾಖೆ ಅಧಿಕಾರಿ ನವೀನ್ ಕಾರ್ಯನಿರ್ವಹಿಸಿದರು

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ ಕಟಗಿ ಚೌಡಳ್ಳಿ, ಮಲವಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮೌಲಾಸಾಬ್ ನದಾಫ್, ಪಿ.ಎಲ್.ಡಿ, ಬ್ಯಾಂಕ್ ಅಧ್ಯಕ್ಷರಾದ ವೈ ಪಿ ಪಾಟೀಲ್, ಮುಖಂಡರಾದ ಪಿ ಜಿ ಪಾಟೀಲ್, ವೈ.ಪಿ.ಭುಜಂಗಿ, ರವಿ ವಾಲ್ಮೀಕಿ, ನಾಗರಾಜ್ ಯಮಕರ, ಬಾಬು ಕಾತ್ರಟ, ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಪ್ರಕಾಶ್ ರಾಥೋಡ, ಪ್ರದೀಪ ಚೌಹಾಣ್, ಸುನೀಲ್ ರಾಥೋಡ, ದೇವಕ್ಕ ಹರಿಜನ್, ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಮುಂತಾದರಿದ್ದರು.

*****