ವೈಯಕ್ತಿಕ ನಿಂದನೆ ಮಾಡೋದು ನಮ್ಮ ಸಂಸ್ಕೃತಿ ಅಲ್ಲ; ಯತ್ನಾಳ್‌ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

Spread the love

ಬೆಂಗಳೂರು: ವೈಯಕ್ತಿಕ ನಿಂದನೆ ಮಾಡೋದು ನಮ್ಮ ಸಂಸ್ಕೃತಿ ಅಲ್ಲ, ಆದರೆ ಯತ್ನಾಳ್‌ ಅವರು ಇದನ್ನೇಲ್ಲ ಮೀರಿ ಮಾತನಾಡಿದ್ದಾರೆ. ಅದು ಅವರ ಸಂಸ್ಕೃತಿ ಏನು ಎಂಬುದು ತೋರಿಸುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಯತ್ನಾಳ್‌ ಗೆ ಕಿಡಿಕಾರಿ ಇದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವೈಯಕ್ತಿಕ ನಿಂದನೆ ಮಾಡೋದು ನಮ್ಮ ಸಂಸ್ಕೃತಿ ಅಲ್ಲ. ಯತ್ನಾಳ್ ಅವರು ಇದನ್ನೆಲ್ಲ ಹೊರತಾಗಿ ಮಾತಾಡಿದ್ದಾರೆ. ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‍ನವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಲು ನಿರಾಕರಿಸಿದ್ರು ಅವರಿದ್ದಾಗ ಯಾಕೆ ಕೊಡಲಿಲ್ಲ? ಅವರಿಗೆ ಈಗ ಮೀಸಲಾತಿ ಕೇಳುವ ಯಾವ ನೈತಿಕತೆ ಇದೆ? ಸ್ವಾಮೀಜಿಗಳು ತಮ್ಮ ಅಕ್ಕ ಪಕ್ಕ ಯಾರಿರ್ತಾರೆ ಅಂತ ಗಮನಿಸಲಿ. ಪಂಚಮಸಾಲಿ ಸಮುದಾಯದ ಅಧ್ಯಕ್ಷರು ವಿಜಯಾನಂದ ಕಾಶೆಪ್ಪನವರ್ ಒಬ್ಬರು ಶಾಸಕರಾಗಿದ್ರು, ಅವರ ತಂದೆ ಮಂತ್ರಿಯಾಗಿದ್ರು. ಅವರು ಯಾಕೆ ಮೀಸಲಾತಿ ಮಾಡಿಲ್ಲ ವರದಿಯನ್ನು ತಿರಸ್ಕಾರ ಮಾಡಲಾಯಿತು ಎಂದರು.