ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲ: ನಾಳೆ, ನಾಡಿದ್ದೋ ಬಿಡುಗಡೆ – ಡಿಕೆ ಶಿವಕುಮಾರ್

Spread the love

ಬೆಂಗಳೂರು: ಇಂದು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ( Karnataka Congress Candidate List ) ಬಿಡುಗಡೆಯಾಗಲಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದ್ರೇ ಇಂದು ಪಟ್ಟಿ ಬಿಡುಗಡೆ ಇಲ್ಲ. ನಾಳೆಯೋ, ನಾಡಿದ್ದೋ ಬಿಡುಗಡೆ ಆಗಲಿ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ತಿಳಿಸಿದ್ದಾರೆ.

ಇಂದು ಬಿಜೆಪಿ ಎಂಎಲ್ಸಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇವತ್ತೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಎಐಸಿಸಿ ಅಧ್ಯಕ್ಷರಾದಂತ ಮಲ್ಲಿಕಾರ್ಜುನ ಖರ್ಗೆ ಹಬ್ಬ ಆಚರಣೆಯಲ್ಲಿದ್ದಾರೆ. ಹೀಗಾಗಿ ನಾಳೆಯೋ, ನಾಡಿದ್ದೋ ಪಟ್ಟಿ ಬಿಡುಗಡೆ ಆಗಲಿದೆ ಎಂದರು.

ಇಂದು ಬಿಜೆಪಿ ಪಕ್ಷದ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಪಕ್ಷಕ್ಕೆ ( Congress Party ) ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.