
ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ಶುಕ್ರವಾರದಿಂದ ರಂಜಾನ್ ಉಪವಾಸ ವ್ರತ ಆರಂಭಿಸಲಾಗುತ್ತದೆ. ಕರಾವಳಿಯಲ್ಲಿ ಮಾತ್ರ ಇಂದಿನಿಂದ ರಂಜಾನ್ ವ್ರತಾಚರಣೆ ಆರಂಭವಾಗಲಿದೆ ಎಂಬುದಾಗಿ ಬೆಂಗಳೂರಿನ ಜಾಮೀಯಾ ಮಸೀದಿ ಮುಖ್ಯಸ್ಥ ಮೌಲನಾ ಮಕ್ಸೂದ್ ಇಮ್ರಾನ್ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಬೆಂಗಳೂರಿನ ಜಾಮೀಯಾ ಮಸೀದಿ ಮುಖ್ಯಸ್ಥ ಮೌಲನಾ ಮಕ್ಸೂದ್ ಇಮ್ರಾನ್, ರಾಜ್ಯ ಮತ್ತು ದೇಶಾದ್ಯಂತ ಶುಕ್ರವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದೆ. ಕರಾವಳಿ ಭಾಗದಲ್ಲಿ ಮಾತ್ರ ಗುರುವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದೆ ಎಂದರು.
ಕರಾವಳಿ ಭಾಗದಲ್ಲಿ ಸೌದಿ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಹೀಗಾಗಿ ಇಂದಿನಿಂದಲೇ ಆ ಭಾಗದಲ್ಲಿ ರಂಜಾನ್ ಉಪವಾಸ ಆರಂಭವಾಗುತ್ತಿದೆ. ರಾಜ್ಯಾಧ್ಯಂತ ಶುಕ್ರವಾರದಿಂದ ರಂಜಾನ್ ಉಪವಾಸ ವ್ರತಾಚರಣೆ ಆಗಲಿದೆ ಎಂದು ತಿಳಿಸಿದರು.