
ಮುಂಡಗೋಡ : ಕ್ಷತ್ರೀಯ ಮರಾಠಾ ಮಂಡಳದ ಸಮುದಾಯ ಭವನವನ್ನು ಇಂದು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.
ಶ್ರೀ ವೇದಾಂತ ಜಗದ್ಗುರು ಶ್ರೀ ಮಂಜುನಾಥ ಸ್ವಾಮೀಜಿ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಪ.ಪಂ.ಅಧ್ಯಕ್ಷರಾದ ಜಯಸುಧಾ ಭೋವಿವಡ್ಡರ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಪ.ಪಂ.ಉಪಾಧ್ಯಕ್ಷರಾದ ಶ್ರೀಕಾಂತ ಸಾನು, ರಾಜ್ಯ ಮರಾಠಾ ಒಕ್ಕೂಟದ ಅಧ್ಯಕ್ಷರಾದ ಶ್ಯಾಮಸುಂದರ ಗಾಯಕವಾಡ, ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪ್ರಮೋದ ಢವಳೆ, ವೈ.ಪಿ.ಪಾಟೀಲ, ಜ್ಞಾನೇಶ್ವರ ಗುಡಿಯಾಳ, ಶ್ರೀಧರ ಡೋರಿ, ಪರಶುರಾಮ ತಡಸದ, ರವಿಗೌಡ ಪಾಟೀಲ, ಕೆಂಜೋಡಿ ಗಲಬಿ, ಸಿದ್ದು ಹಡಪದ, ಕೆ.ಎಫ್.ಪುರದವರ್, ಎಂ.ಪಿ.ಕುಸೂರ, ಪಿ.ಜಿ.ಪಾಟೀಲ, ವಸಂತ ಪಾಟೀಲ, ನಾಗರಾಜ ಸಂಕನಾಳ, ಶಿವರಾಜ ಸುಬ್ಬಾಯವರ್, ಬಾಬಣ್ಣ ಕೋಣನಕೇರಿ, ಸಂದೀಪಕುಮಾರ ಬೊಬಾಟೆ, ನಾಗರಾಜ ಬೆಣ್ಣಿ, ಗಿರೀಶ ಓಣಿಕೇರಿ, ಅಣ್ಣಪ್ಪ ಪಾಟೀಲ,ಎನ್.ಡಿ.ಕಿತ್ತೂರ, ವಿಠ್ಠಲ ಬಾಳಂಬೀಡ ಮುಂತಾದವರಿದ್ದರು.
ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಎಲ್.ಟಿ.ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಕ್ಷತ್ರೀಯ ಮರಾಠಾ ಮಂಡಳದ ಅಧ್ಯಕ್ಷರಾದ ಡಿ.ಎಫ್.ಮಡ್ಲಿ ಸ್ವಾಗತಿಸಿದರು. ಪಾಂಡುರಂಗ ಟಿಕ್ಕೋಜಿ ಕಾರ್ಯಕ್ರಮ ನಿರೂಪಿಸಿದರು.