
ಮುಂಡಗೋಡ : ಮುಂಡಗೋಡದಿಂದ ಜಿನ ಮಂದಿರದಲ್ಲಿ ಭಗವಾನ್ ಶ್ರೀ 1008 ಶಂಭವನಾಥ ತೀರ್ಥಂಕರ ಜಿನಬಿಂಬದ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವವು ಇಂದಿನಿಂದ ಆರಂಭಗೊಂಡಿದೆ.
ಈ ಮಹಾ ಮಹೋತ್ಸವದಲ್ಲಿ ಸೋಂದಾದ ಪರಮಪೂಜ್ಯ ಸ್ವಸ್ತಿ ಶ್ರೀಭಟ್ಟಾಕಲಂಕ ಭಟ್ಟಾರಕ ಸ್ವಾಮಿಗಳು ಮಾತನಾಡುತ್ತಾ, ನಾವು ಅಹಿಂಸಾ ಧರ್ಮವನ್ನು ಎಷ್ಟೋ ಆಚರಣೆ ಮಾಡುತ್ತೇವೆಯೋ ಅದರಿಂದ ಸುಖ ಸಿಗುತ್ತದೆ. ಎಷ್ಟೋ ತ್ಯಾಗ ಮಾಡುತ್ತೇವೆಯೋ ಅಷ್ಟು ನಮಗೆ ನೆಮ್ಮದಿ ಸಿಗುತ್ತದೆ ಎಂದರು.
ಪ.ಪೂ. ಸಿದ್ದಾಂತಯೋಗಿ ಮುನಿಶ್ರೀ ಶ್ರೀ108 ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯ ವಹಿಸಿದ್ದರು.
ವರೂರಿನ ಸ್ವಸ್ತಿ ಶ್ರೀಧರ್ಮಸೇನ ಭಟ್ಟಾರಕ ಸ್ವಾಮಿಗಳು ಉಪಸ್ಥಿತರಿದ್ದರು.
ಇಂದು ಬೆಳಿಗ್ಗೆ ನಾಂದಿ ಮಂಗಳ, ವಾದಯ ಘೋಷಣೆ, ಆಚಾರ್ಯ ನಿಮಂತ್ರಣ, ಮಂಗಲಸ್ನಾನ ಸೌಧರ್ಮ ಇಂದ್ರ ಇಂದ್ರಾಣಿಯರ ಮೆರವಣಿಗೆ, ಮಂಗಲ ಕಲಶ ತರುವುದು, ಪೀಠಯಂತ್ರ ಆರಾಧನೆ, ಧ್ವಜಾರೋಹಣ, ನವಗ್ರಹ ಹೋಮ, ಮಂಟಪವೇಧಿ ಪ್ರತಿಷ್ಠಾ, ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ, ಪಂಚಾಮೃತ ಅಭಿಷೇಕ, ವಾಸ್ತು ವಿಧಾನ ಕಾರ್ಯಕ್ರಮಗಳು, ಪೂಜ್ಯ ಶ್ರೀಗಳಿಂದ ಮಂಗಲ ಪ್ರವಚನ ಕಾರ್ಯಕ್ರಮಗಳು ಜರುಗಿದವು.