ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ

Spread the love

ಬೆಂಗಳೂರು: ಒಬಿಸಿ ಪಟ್ಟಿಯಲ್ಲಿ 2ಬಿ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿದ ಕಾಂಗ್ರೆಸ್, ಪಕ್ಷ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಕೋಟಾವನ್ನು ಮರುಸ್ಥಾಪಿಸುವುದಾಗಿ ಭಾನುವಾರ ಘೋಷಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕ್ರಮವನ್ನು ಅಸಂವಿಧಾನಿಕ ಎಂದು ”ಅವರು ಮೀಸಲಾತಿಯನ್ನು ಆಸ್ತಿಯಂತೆ ಹಂಚಬಹುದು ಎಂದು ಭಾವಿಸುತ್ತಾರೆ. ಇದು ಆಸ್ತಿ ಅಲ್ಲ. ಇದು ಅಲ್ಪಸಂಖ್ಯಾತರ ಹಕ್ಕು,ಅವರ ಶೇಕಡಾ ನಾಲ್ಕನ್ನು ರದ್ದುಪಡಿಸಿ ಯಾವುದೇ ಪ್ರಮುಖ ಸಮುದಾಯಗಳಿಗೆ ನೀಡುವುದನ್ನು ನಾವು ಬಯಸುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ನಮ್ಮ ಸಹೋದರರು ಮತ್ತು ಕುಟುಂಬದ ಸದಸ್ಯರು”ಎಂದರು.

ಇಡೀ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರು ಈ ಪ್ರಸ್ತಾಪವನ್ನು ತಿರಸ್ಕರಿಸುತ್ತಿದ್ದಾರೆ. ಮುಂದಿನ 45 ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.