ಮುಂಡಗೋಡ: ಉಚಿತ ಲಸಿಕೆ ಅಭಿಯಾನಕ್ಕೆ ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಜಿ.ಪಂ. ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ, ಕೊರೋನಾದಂತಹ ಮಹಾಮಾರಿಯನ್ನು ತಡೆಗಟ್ಟಲು ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದರು.
ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಕೊರೋನಾದಂತಹ ಮಹಾಮಾರಿಯಿಂದಾಗಿ ಜನರು ಕೆಲಸವಿಲ್ಲದೆ ಪರದಾಡಿದರು. ಆ ವೇಳೆಯಲ್ಲಿ ಸರಕಾರ ಕಾರ್ಮಿಕ ವರ್ಗಕ್ಕೆ ಸಹಾಯಧನ ನೀಡುತ್ತಿದೆ. ಪ್ರತಿಯೋಬ್ಬರು ಲಸಿಕೆಯನ್ನು ಹಾಕಿಸಿಕೊಂಡು ಮಹಾಮಾರಿಯಂತಹ ಕೊರೋನಾವನ್ನು ತಡೆಗಟ್ಟಬೇಕಾಗಿದೆ ಎಂದರು.
ತಾಲೂಕಿನಲ್ಲಿ ಪಿಎಚ್‍ಸಿ ಅರಶಿಣಗೇರಿ ವಲಯದಲ್ಲಿ 6 ಕೇಂದ್ರಗಳಲ್ಲಿ, ಪಿಎಚ್‍ಸಿದಲ್ಲಿ 4 ಕೇಂದ್ರಗಳಲ್ಲಿ ಪಿಎಚ್‍ಸಿ ಮಳಗಿ ವಲಯದಲ್ಲಿ 4 ಕಡೆ, ಪಿಎಚ್‍ಸಿ ಕಾತೂರ 6 ಕಡೆಗಳಲ್ಲಿ 18ವರ್ಷದಿಂದ 44ವರ್ಷದವರೆಗೆ 1000ಲಸಿಕೆ, 45ರಿಂದ ಮೇಲ್ಪಟ್ಟವರಿಗೆ 1910ಲಸಿಕೆ ಸೇರಿದಂತೆ ಒಟ್ಟು 2910 ಲಸಿಕೆ ಹಾಕುವ ಗುರಿಯನ್ನು ಸೋಮವಾರ ಹೊಂದಿದ್ದೇವೆ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ.ಪಂ.ಮುಖ್ಯಾಧಿಕಾರಿ ಸಂಗನಬಸಯ್ಯ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಸೇರಿದಂತೆ ಮುಂತಾದವರಿದ್ದರು.