ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ನಾಲ್ವರು ಪಕ್ಷೇತರರು ಸೇರಿ ಒಟ್ಟು 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದವರ ವಿವರ ಇಂತಿದೆ :
- ಅಂದಲಗಿ ವೀರಭದ್ರಗೌಡ ಪಾಟೀಲ(ಕಾಂಗ್ರೆಸ್)
- ಲಕ್ಷ್ಮಣ ಭೀಮಣ್ಣ ಬನ್ಸೋಡೆ(ಕಾಂಗ್ರೆಸ ಬಂಡಾಯ)
- ಆನಂದ ಗಣಪತಿ ಭಟ್ಟ(ಪಕ್ಷೇತರ)
- ಅರಬೈಲ್ ಹೆಬ್ಬಾರ ಶಿವರಾಮ(ಬಿ.ಜೆ.ಪಿ.)
- ನಾಗೇಶ ಹೊನ್ನಯ್ಯ ನಾಯ್ಕ(ಜೆ.ಡಿ.ಎಸ್.)
- ಸಂತೋಷ ಮಂಜುನಾಥ ಶೇಟ ರಾಯ್ಕರ (ಕೆ.ಆರ್.ಪಿ.ಪಿ.)
- ಮಂಜುನಾಥ ಲವಾ ಕುಲುಮಕರ(ಆಮ್ ಆದ್ಮಿ ಪಾರ್ಟಿ)
- ಮಂಜುನಾಥ ಶಿರಹಟ್ಟಿ (ಕರ್ನಾಟಕ ರಾಷ್ಟ್ರ ಸಮಿತಿ)
- ಚಿದಾನಂದ ಯಲ್ಲಪ್ಪ ಹರಿಜನ(ಪಕ್ಷೇತರ)
- ಶೆಟ್ಟಪ್ಪ ಯಲ್ಲಪ್ಪ ಭೋವಿವಡ್ಡರ(ಪಕ್ಷೇತರ)
ಇವರೆಲ್ಲರೂ ಸದ್ಯ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ಎಷ್ಟು ಜನ ಅಭ್ಯರ್ಥಿಗಳು ವಾಪಸ್ ಪಡೆಯುತ್ತಾರೆ ಹಾಗೂ ಅಂತಿಮವಾಗಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆಂಬುದು ಸದ್ಯದ ಕುತೂಹಲದ ವಿಷಯವಾಗಿದೆ. ಏಪ್ರಿಲ್ 24 ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದೆ.