ಮುಂಡಗೋಡ : ತಾಲೂಕಿನ ಮೈನಳ್ಳಿ ಗ್ರಾಮದ ಯುವಕ ಪ್ರಸಾದಕುಮಾರ್ ಕಲಾಲ ಭಡಂಗಕರ ಎಂಬಾತನು ಹಾವೇರಿ ಜಿಲ್ಲೆಯ ಖಂಡೆಬಾಗೂರು ಗ್ರಾಮದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಸಾದಕುಮಾರ್ ಭಡಂಗಕರ, ಆತನ ತಂದೆ ಪ್ರಕಾಶ ಭಡಂಗಕರ ಹಾಗೂ ತಾಯಿ ಶಾಂತಾ ಭಡಂಗಕರ ಮೇಲೆ ದೂರು ನೀಡಿದ್ದಾರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ…..?
2022 ರಂದು ರಾಣೆಬೆನ್ನೂರಿನ DDUGKY ಸೆಂಟರನಲ್ಲಿ ಮಾರ್ಕೆಟಿಂಗ್ ಸೇಲ್ಸ್ ಬಗ್ಗೆ ಹಾಗೂ ಬೇರೆ ಬೇರೆ ಜಾಬ್ ಗಳ ಬಗ್ಗೆ ತರಬೇತಿ ಪಡೆಯುವಾಗ ನನಗೆ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಪ್ರಸಾದಕುಮಾರ್ ಭಡಂಗಕರ ಅವರ ಪರಿಚಯವಾಯಿತು. ನಾನು ಪರಿಶಿಷ್ಟ ಜಾತಿ ಲಂಬಾಣಿ ಸಮಾಜದವಳು ಅಂತ ಗೊತ್ತಿದ್ದರೂ ಸಹ ನನ್ನನ್ನು ಪ್ರೀತಿಸುತ್ತಿದ್ದನು. 2022ರಂದು ಗಣೇಶ ಹಬ್ಬದ ವೇಳೆಯಲ್ಲಿ ಪ್ರಸಾದನು ಮೈನಳ್ಳಿಗೆ ನನ್ನನ್ನು ಕರೆದುಕೊಂಡು ಬಂದು ಯಾಸ್ಮಿನ್ ಎಂಬವರ ಮನೆಯಲ್ಲಿ ಉಳಿಸಿದ್ದನು. ಪ್ರಸಾದನು ನನಗೆ ಮದುವೆಯಾಗುವುದಾಗಿ ಹೇಳಿ ನಂಬಿಸಿ ನಾನು ಬೇಡವೆಂದರೂ ಒತ್ತಾಯಪೂರ್ವಕವಾಗಿ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದನು.
ಇದಾದ ನಂತರ ಪ್ರಸಾದ ಮತ್ತು ನಾನು ಬೆಂಗಳೂರಿಗೆ ಹೋದೆ. ಪ್ರಸಾದನು ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ನಾನು ಗರ್ಭಿಣಿಯಾದೆ ಈ ವಿಷಯವನ್ನು ನಾನು ಪ್ರಸಾದನಿಗೆ ಹೇಳಿದಾಗ ಆತ ಟ್ಯಾಬ್ಲೆಟ್ ತಂದು ಕೊಟ್ಟು ನನಗೆ ತಿನ್ನಿಸಿದ. ನಾನು ಬೆಂಗಳೂರಿನ ವಿ.ಪಿ. ಮಾಲ್ ನಲ್ಲಿ ಹಾಗೂ ಪ್ರಸಾದನು ಕೊಟೆಕ್ ಮಹೇಂದ್ರ ಬ್ಯಾಂಕನಲ್ಲಿ ಕೆಲಸಕ್ಕೆ ಸೇರಿದನು. ನಾವು ಬೆಂಗಳೂರಿನಲ್ಲಿದ್ದಾಗ ಪ್ರಸಾದನು ನನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ ನನ್ನೊಂದಿಗೆ ತಿರುಗಾಡುತ್ತಿದ್ದನು.
ಕಳೆದ ಮಾರ್ಚ ತಿಂಗಳಲ್ಲಿ ಆತನು ಊರಿಗೆ ಬಂದವನು ಮರಳಿ ಬೆಂಗಳೂರಿಗೆ ಬರದೇ ಹಾಗೂ ನನ್ನೊಂದಿಗೆ ಮಾತನಾಡದೇ ಇದ್ದಾಗ ನಾನು ಮೈನಳ್ಳಿ ಬಂದು ಆತನನ್ನು ಕೇಳಿದಾಗ ನೀನು ನನಗೆ ಇಷ್ಟವಿಲ್ಲ. ಕೀಳು ಜಾತಿಯವಳು ಇದ್ದಿ. ಇಲ್ಲಿಂದ ಹೊರಟು ಹೋಗು ತಾನು ಬೆಂಗಳೂರಿಗೆ ಬರುವುದಾಗಿ ಹೇಳಿ ನನ್ನನ್ನು ಪುನಃ ಬೆಂಗಳೂರಿಗೆ ಕಳುಹಿಸಿದನು. ಆದರೆ ಪ್ರಸಾದ ಬೆಂಗಳೂರಿಗೆ ಬರಲೇ ಇಲ್ಲ.
ನಾನು ಮೇ 15ರಂದು ಮೈನಳ್ಳಿ ಗ್ರಾಮಕ್ಕೆ ಹೋಗಿ ಪ್ರಸಾದನ ತಂದೆ ಪ್ರಕಾಶ ಹಾಗೂ ತಾಯಿ ಶಾಂತ ಅವರಿಗೆ ನನ್ನ ಹಾಗೂ ಪ್ರಸಾದನ ಪ್ರೀತಿ ಬಗ್ಗೆ ಹೇಳಿದಾಗ ಅವರು, ನನಗೆ ನೀನು ಲಂಬಾಣಿ ಜಾತಿಯ… ಕೇಳು ಜಾತಿಯವಳು ಎಂದು ಅವಾಚ್ಯವಾಗಿ ಬೈದರು. ಊರ ಪ್ರಮುಖರಾದ ಸಿ.ಕೆ.ಅಶೋಕ ಅವರಿಗೆ ತಿಳಿಸಿದಾಗ ಅವರು ಈ ವಿಷಯವನ್ನು ಪ್ರಸಾದನ ತಂದೆ–ತಾಯಿಗೆ ತಿಳಿಸಿದಾಗ ಅವರು ಒಪ್ಪಲಿಲ್ಲ. ಸಾಧನ ಸಂಸ್ಥೆಯ ಇಸಬೆಲ್ಲಾ ಮೇಡಮ್ ಅವರು ಕೂಡ ಪ್ರಸಾದನ ತಂದೆ– ತಾಯಿಯವರನ್ನು ಕರೆದು ತಿಳಿ ಹೇಳಿದರೂ ಸಹ ಪ್ರಸಾದ್ ನನ್ನನ್ನು ಮದುವೆಯಾಗಲು ಒಪ್ಪಲಿಲ್ಲ.
ಪ್ರಸಾದ ಭಡಂಕರನ ತಂದೆ ಪ್ರಕಾಶ ಭಡಂಕರ ಹಾಗು ತಾಯಿ ಶಾಂತ ಭಡಂಗಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮನೆಯ ಜನರನ್ನು ವಿಚಾರಿಸಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ನೀಡಲು ನನ್ನಿಂದಲೇ ವಿಳಂಬವಾಗಿರುತ್ತದೆ ಎಂದು ಪೊಲೀಸ್ ಠಾಣೆಗೆ ನಡೆದ ದೂರಿನಲ್ಲಿ ಸಂತ್ರಸ್ತ ಯುವತಿ ತಿಳಿಸಿದ್ದಾರೆ.
ಅಭಿನಂದನೆ :
ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸುತ್ತಿರುವ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಇಸಬೆಲ್ಲಾ ಝೇವಿಯರ್ ಅವರಿಗೆ ಜನರು ಅಭಿನಂದನೆ ಸಲ್ಲಿಸಿ, ಹೋರಾಟಕ್ಕೆ ಜಯ ಸಿಗಲಿ ಎಂದಿದ್ದಾರೆ.