ಬೆಂಗಳೂರು: ಜು.31 ರಂದು ಎಸ್ಸಿಪಿ-ಟಿಪಿಎಸ್ಪಿ ಸಭೆ ಹಿನ್ನೆಲೆ ಇಂದು (ಜು.30) ಸಿಎಂ ಅಧಿಕೃತ ನಿವಾಸದಲ್ಲಿ ಗೃಹ ಸಚಿವರಾದ ಡಾ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಜೊತೆ ಸಭೆ ನಡೆಸಿದ್ದಾರೆ.
ಸಿ ಎಂ ಸಿದ್ದರಾಮಯ್ಯರವರನ್ನುಅವರ ಸರ್ಕಾರಿ ನಿವಾಸದಲ್ಲಿ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಭೇಟಿ ಮಾಡಿದರು.
ಇದೇ ವೇಳೆ ಸಿಎಂ ನಿವಾಸದಲ್ಲಿದ್ದ ಸಚಿವ ಪ್ರಿಯಾಂಕ ಖರ್ಗೆ ದಲಿತರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಇದರ ಜೊತೆ ಹಲವು ವಿಚಾರಗಳ ಮಾಹಿತಿ ಪಡೆಯುತ್ತಿದ್ದಾರೆ.
ನಾಳೆ ಎಸ್ಸಿಪಿ-ಟಿಪಿಎಸ್ಪಿ ಸಭೆ ನಡೆಸಲು, ಇಂದು ಸಿಎಂ ಗೃಹ ಸಚಿವರೂ ಹಾಗೂ ಸಚಿವರ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.