
ಮುಂಡಗೋಡ : ಬಾಯಾರಿಕೆಯಾಗಿ ನೀರು ಕುಡಿಯಲೆಂದು ಅರಣ್ಯದಿಂದ ಸಲುವಾಗಿ ಜಲಾಶಯಕ್ಕೆ ಬಂದ ಜಿಂಕೆಯನ್ನು ನಾಯಿಗಳು ಬೆನ್ನತ್ತಿ ಗಾಯಗೊಳಿಸಿ, ಕೊಂದು ಹಾಕಿದ ಘಟನೆ ಶನಿವಾರ ಸಂಭವಿಸಿದೆ.
ಅರಣ್ಯ ಇಲಾಖೆಯವರು ಕಾಡಿನಲ್ಲಿ ಅಲ್ಲಲ್ಲಿ ಗುಂಡಿಗಳನ್ನು ತೆಗೆದು ಅದರಲ್ಲಿ ನೀರು ತುಂಬಿಸಿದ್ದರೆ ಜಿಂಕೆ ಇಲ್ಲಿ ಬಂದು ಸಾವನ್ನಪ್ಪಿರಲಿಲ್ಲ. ಈ ಘಟನೆ ಕೂಡ ಸಂಭವಿಸುತ್ತಿರಲಿಲ್ಲವೆಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.

ಅರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಅಲ್ಲಲ್ಲಿ ಗುಂಡಿಗಳನ್ನು ತೆಗೆದು ನೀರು ತುಂಬಿಸಿಡುವಂತೆ ಸನವಳ್ಳಿ ಗ್ರಾಮದ ಮುಖಂಡರಾದ ರಾಜು ಗುಬ್ಬಕ್ಕನವರ್ ಹಾಗೂ ಸಂಪತಕುಮಾರ ಕ್ಯಾಮಣಕೇರಿ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿನಂತಿಸಿದ್ದಾರೆ.