ಸ್ಪೀಕರ್ ಸ್ಥಾನಕ್ಕೆ ದೇಶಪಾಂಡೆ ಸೂಕ್ತ ವ್ಯಕ್ತಿ

Spread the love

ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಸಿ.ಎಂ. ಆಗಿ ಸಿದ್ದರಾಮಯ್ಯ ಹಾಗೂ ಡಿ.ಸಿ.ಎಂ. ಆಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ವಿಧಾನಸಭೆಗೆ ಈಗ ಸ್ಪೀಕರ್ ಯಾರಾಗಲಿದ್ದಾರೆ..? ಎಂಬುದೇ ಸದ್ಯದ ಕುತೂಹಲ.

ಸ್ಪೀಕರ್ ಸ್ಥಾನಕ್ಕೆ ನಿಜಕ್ಕೂ ಸೂಕ್ತ ವ್ಯಕ್ತಿಯೆಂದರೆ ಆರ್.ವಿ.ದೇಶಪಾಂಡೆ. ದೇಶಪಾಂಡೆಯವರಲ್ಲಿ ಅಪಾರ ಅನುಭವದ ಸಂಪತ್ತಿದೆ.

ಈಗಾಗಲೇ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ಸಹಕಾರಿ, ಪ್ರವಾಸೋದ್ಯಮ, ಮಾಹಿತಿ ಮತ್ತು ತಂತ್ರಜ್ಞಾನ, ಸಣ್ಣ ನೀರಾವರಿ ಖಾತೆಗಳ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆರ್.ವಿ.ದೇಶಪಾಂಡೆಯವರಿಗೆ 8 ಜನ ಮುಖ್ಯಮಂತ್ರಿಗಳ ಕೈ ಕೆಳಗೆ ಕೆಲ ಮಾಡಿದ ಅನುಭವ ಕೂಡಾ ಇದೆ. ಆಶ್ಚರ್ಯವೆಂದರೆಆರ್.ವಿ.ದೇಶಪಾಂಡೆಯವರು ನನಗೆ ಸ್ಪೀಕರ್ ಆಗುವ ಅರ್ಹತೆ ಇಲ್ಲವೆಂದು ಅನಿಸುತ್ತದೆ ಎಂದು ಮಾಧ್ಯಮದ ಮುಂದೆ ಹೇಳಿರುವುದು..!

ಇದು ದೇಶಪಾಂಡೆಯವರ ದೊಡ್ಡತನ ಪ್ರದರ್ಶಿಸುತ್ತದೆ..!! 

ಸ್ಪೀಕರ್ ಸ್ಥಾನ ಆರ್.ವಿ.ದೇಶಪಾಂಡೆಯವರಿಗೆ ನೀಡಿದರೆ ಅವರು ಅದನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ಎರಡು ಮಾತಿಲ್ಲ.

ಹಿರಿಯ ಶಾಸಕರಾಗಿ ಅಪಾರ ಅನುಭವವಿರುವ ಆರ್.ವಿ.ದೇಶಪಾಂಡೆಯವರನ್ನು ಕಾಂಗ್ರೆಸ ವರಿಷ್ಟರು ಅವರ ಮನವೊಲಿಸಿ ಸ್ಪೀಕರ್ ಸ್ಥಾನ ನೀಡುವಲ್ಲಿ ಯಶಸ್ವಿಯಾಗುವರೇ..? ಎಂಬುದನ್ನು ಕಾದು ನೋಡಬೇಕಾಗಿದೆ.

ದೇಶಪಾಂಡೆಯವರ ಅಭಿಮಾನಿಗಳು ಅವರು ಸ್ಪೀಕರ್ ಆಗುವುದನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.