ಮುಂಡಗೋಡ: ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಸೋಮವಾರ ಸರಕಾರಿ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಚ್.ಎಫ್.ಇಂಗಳೆ, ಮಲೇರಿಯಾ ರೋಗವೂ ಸೊಳ್ಳೆಯಿಂದ ಹರಡುವ ರೋಗವು 2016ರಲ್ಲಿ 3 ಪ್ರಕರಣ ಹಾಗೂ 2018ರಲ್ಲಿ ಮೂರು ಪ್ರಕರಣ ಹೊರತು ಪಡಿಸಿದರೆ ಕಳೆದ ಐದು ವರ್ಷದಲ್ಲಿ ಇದುವರೆಗೂ ಒಂದು ಪ್ರಕರಣವೂ ದಾಖಲಾಗಿಲ್ಲ. ಈ ಮಲೇರಿಯಾ ರೋಗ ಗೋವಾ ಹಾಗೂ ಮಂಗಳೂರ ಭಾಗಕ್ಕೆ ಕೂಲಿ ಕೆಲಸಕ್ಕೆ ಹೋದವರಿಗೆ ಕಾಣಿಸಿಕೊಂಡಿತ್ತು. ಇದೀಗ ಇಂತಹ ಪ್ರಕರಣಗಳಿಲ್ಲ. ಆದರೂ ಸಹ ಜನರು ತಮ್ಮ ಮನೆಯ ಸುತ್ತ ಮುತ್ತಲು ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಚ್.ಹಿರೇಮಠ ವಂದಿಸಿದರು.