ವಿದ್ಯುತ್ ಕಂಬಕ್ಕೆ ಡಿಕ್ಕಿ : ಬೈಕ್ ಸವಾರ ಸಾವು

Spread the love

  ಕುಮಟಾ : ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆಯೊಂದು ಕುಮಟಾ ತಾಲೂಕಿನ ಭಾವಿಕೊಡ್ಲ ಗ್ರಾಮದ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಮುಡ್ರಾಣಿಯ ನಿವಾಸಿ ಪ್ರಸನ್ನ ದೇವುಗೌಡ ಎಂದು ಗುರುತಿಸಲಾಗಿದೆ. ಗೋಕರ್ಣದಲ್ಲಿ ಮದುವೆ ಕಾರ್ಯ ಮುಗಿಸಿ ವಾಪಾಸ್ಸಾಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.