ದಾಂಡೇಲಿ : ದಾಂಡೇಲಿಯ ಕಾಳಿ ನದಿಯ ಕೋಗಿಲಬನದ ರಸ್ತೆಯಲ್ಲಿ ಇಂದು ದೊಡ್ಡದಾದ ಮೊಸಳೆಯೊಂದು ಆಹಾರ ಅರಸಿ ಬಂದು ರಾಜಾರೋಷವಾಗಿ ತಿರುಗಾಡುತ್ತಿತ್ತು. ಆಗಾಗ ಬಾಯ್ದೆರೆದು ಹೆದರಿಸುತ್ತಿತ್ತು. ಮೊಸಳೆಯ ಈ ಸಂಚಾರ ಜನರನ್ನು ಭಯ ಬೀಳಿಸಿತ್ತು.
ರಸ್ತೆಯ ಅಕ್ಕ ಪಕ್ಕದ ಮನೆಯವರು ಬಾಗಿಲು ಹಾಕಿಕೊಂಡು ಮನೆಯೊಳಗೆ ಸೇರಿದ್ದರು. ಕೆಲವರು ಮರದಿಂದಲೇ ವಿಡಿಯೋ ಮಾಡುತ್ತಿದ್ದರು.
ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಆ ಮೊಸಳೆಯನ್ನು ಕಾಳಿನದಿಗೆ ಹೊಂದಿಕೊಂಡಿದ್ದ ನಾಲಾದೊಳಗೆ ಸೇರುವ ಹಾಗೆ ಮಾಡಿದರು. ಮನೆಯೆದುರು ಬಂದು ಜನರನ್ನು ಭಯ ಬೀಳಿಸುತ್ತ ಸಂಚರಿಸುತ್ತಿದ್ದ ಮೊಸಳೆ ಕೊನೆಗೂ ಮತ್ತೆ ನದಿ ಸೇರುತ್ತಿದ್ದಂತೆಯೇ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.