ಮುಂಡಗೋಡ : 5 ವರ್ಷದಲ್ಲಿ 19 ಜನ ರೈತರ ಆತ್ಮಹತ್ಯೆ….!

Spread the love

ಮುಂಡಗೋಡ : ಸರಿಯಾಗಿ ಬೆಳೆಬಾರದ ಕಾರಣ, ಬೆಳೆಸಾಲವೂ ತೀರಿಸಲಾಗದ ಹಿನ್ನೆಲೆಯಲ್ಲಿ ಕಳೆದ 5 ವರ್ಷದಿಂದ ಮುಂಡಗೋಡ ತಾಲೂಕಿನಲ್ಲಿ ಈವರೆಗೆ ಒಟ್ಟು 19 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬ್ಯಾಂಕ ಹಾಗೂ ಸೊಸೈಟಿಯಲ್ಲಿ ಸಾಲ ತುಂಬುವಂತೆ ಒತ್ತಡ ಹೇರುತ್ತಿರುವುದರಿಂದ ರೈತರು ಮನನೊಂದು ಆತ್ಮಹತ್ಯೆ ಎಂಬ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ.

2021-21ನೇ ಸಾಲಿನಲ್ಲಿ ಅತಿ ಹೆಚ್ಚು ರೈತರು ಅಂದರೆ 7 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017-18ರಲ್ಲಿ 3 ಜನ ರೈತರು, 2018-19ರಲ್ಲಿ 4 ಜನ ರೈತರು, 2019-20ರಲ್ಲಿ 3 ಜನ ರೈತರು, 2020-21ರಲ್ಲಿ 7 ಜನ ರೈತರು, 2021ರಲ್ಲಿ ಈವರೆಗೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.