ಎಲ್ಲ ಬಿಪಿಎಲ್ ಕಾರ್ಡದಾರರಿಗೆ ರೇಶನ್ ಕಿಟ್ ನೀಡುತ್ತಿದ್ದೇವೆ : ಸಚಿವ ಹೆಬ್ಬಾರ್

Spread the love

ಮುಂಡಗೋಡ : ಮೂರು ಬಾರಿ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಈಗ ನೀವು ಸಂಕಷ್ಟದಲ್ಲಿದ್ದಾಗ ಭಾಗಿಯಾಗುವುದು ನನ್ನ ಕರ್ತವ್ಯ. ಅದಕ್ಕಾಗಿ 63 ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ ದಿನಸಿ ಕಿಟ್‍ಗಳನ್ನು ಸ್ವಂತ ಖರ್ಚಿನಿಂದ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

  ಇಂದು ಅವರು ತಾಲೂಕಿನ ಮೈನಳ್ಳಿ ಹಾಗೂ ಉಗ್ಗಿನಕೇರಿ ಗ್ರಾಮದಲ್ಲಿ ಹೆಬ್ಬಾರ್ ರೇಶನ್ ಕಿಟ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.

  ಯಾವುದೇ ಜಾತಿ, ಮತ, ಪಕ್ಷ ಭೇದವಿಲ್ಲದೇ ಎಲ್ಲ ಬಿಪಿಎಲ್ ಕಾರ್ಡ್‍ದಾರರಿಗೂ ಕಿಟ್‍ಗಳನ್ನು ನೀಡುತ್ತಿದ್ದೇವೆ. ಇದಕ್ಕೆ ಸಹಕರಿಸಿದ ಮುಂಡಗೋಡ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಬೂತ್ ಕಮಿಟಿಯವರು ಇದಕ್ಕೆಲ್ಲ ಸಹಕಾರ ನೀಡಿದ್ದಾರೆ.

   ಕೊರೊನಾ ಸೋಂಕಿಗೆ ಭಯ ಬೀಳುವುದು ಬೇಡ. ಧೈರ್ಯದಿಂದ ಎದುರಿಸಿ ಮಾರ್ಗಸೂಚಿಯನ್ನು ಪಾಲಿಸಿ ಎಂದು ಕಿವಿಮಾತು ಹೇಳಿದರು.

   ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರವಿಗೌಡ ಪಾಟೀಲ, ಯುವ ನಾಯಕ ವಿವೇಕ ಹೆಬ್ಬಾರ, ತಾಲೂಕಾ ಬಿ.ಜೆ.ಪಿ. ಅಧ್ಯಕ್ಷ ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಂಜಾವತಿ ಗ್ರಾ.ಪಂ. ಅಧ್ಯಕ್ಷ ಬಸಯ್ಯ ನಡುವಿನಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.