
ಶಿಗ್ಗಾಂವಿ : ವಿ.ಆಯ್.ಎಸ್.ಪಿ ಸಕ್ಕರೆ ಕಾರ್ಖಾನೆ ವತಿಯಿಂದ ಕಬ್ಬು ಬೆಳೆಯುವ ಕಬ್ಬು ಬೆಳೆಗಾರರು ಕಟಾವು ಹಾಗೂ ಸಾಗಾಣಿಕೆಯಲ್ಲಿ ಸ್ವಾವಲಂಬಿಗಳಾಗಲು ಸಾಲ – ಸೌಲಭ್ಯದೊಂದಿಗೆ ಟಿ – ಕಾರ್ಟ್ ( ಟ್ಯಾಕ್ಟರ್ ಟ್ರಾಲಿ ) ನೀಡುವ ಯೋಜನೆಯನ್ನುಜಾರಿಗೊಳಿಸಿದೆ. ಇಂದು ಕಾರ್ಖಾನೆಯ ಆವರಣದಲ್ಲಿ ಯುವನಾಯಕರು ಹಾಗೂ ಕಾರ್ಖಾನೆಯ ಮಾಲಿಕರಾದ ವಿವೇಕ್ ಹೆಬ್ಬಾರ ಅವರು ಸಾಂಕೇತಿಕವಾಗಿ ರೈತರುಗಳಿಗೆ ಕಬ್ಬು ಸಾಗಿಸುವ ಟಿ – ಕಾರ್ಟ್ಅನ್ನು ವಿತರಿಸಿದರು.

ನಂತರ ಮಾತನಾಡಿದ ಯುವನಾಯಕರಾದ ವಿವೇಕ ಹೆಬ್ಬಾರ ಅವರು ಸ್ಥಳೀಯ ರೈತರನ್ನು ಸ್ವಾಲಂಬಿಗಳಾಗಿಸಲು ಹಾಗೂ ಅವರು ತಾವು ಬೆಳೆದ ಕಬ್ಬುನ್ನು ಸುಗಮವಾಗಿ ಕಾರ್ಖಾನೆಗೆ ಸಾಗಾಣಿಕೆ ಮಾಡಲು ಸಾಲ ಸೌಲಭ್ಯಗಳೊಂದಿಗೆ ಉತ್ತಮ ಗುಣಮಟ್ಟದ ಟಿ – ಕಾರ್ಟ್ ನೀಡುವ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಂಗಾಮಿನಲ್ಲಿ 100 ರೈತರಿಗೆ ಟಿ – ಕಾರ್ಟ್ಅ ನ್ನು ವಿತರಿಸುವ ಗುರಿಯನ್ನು ಹೊಂದಿದ್ದೇವೆ. ಸ್ಥಳೀಯ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥಸಿ.ಬಿ, ಕಬ್ಬು ವಿಭಾಗದ ಅಧಿಕಾರಿಗಳಾದ ಬಿ.ಬಿ.ಪಾಟೀಲ್ , ಲಕ್ಷ್ಮಣ ಯಮಿನವರ , ಜಿ.ಆರ್.ಜುಮನಾಳ ಹಾಗೂ ಶರಣು ಕೋಡಿಹಳ್ಳಿ ಸೇರಿದಂತೆ, ಸ್ಥಳೀಯ ರೈತ ಮುಖಂಡರು, ರೈತರು, ಗ್ರಾಮಸ್ಥರು ಇದ್ದರು.