
ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕಜಿ ಟಿ ದೇವೇಗೌಡರು ಕಾಂಗ್ರೆಸ್ಗೆ ಸೇರಲು ಆಸಕ್ತಿ ತೋರಿದರೆ ನಾವು ಖಂಡಿತವಾಗಿಯೂ ಬರಮಾಡಿಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಲ್ಲಿ ಡಿಕೆಶಿ-ಜಿಟಿ ದೇವೇಗೌಡ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಅವರು ಆಸಕ್ತಿ ತೋರಿಸಿದ್ರೆ ನಾವು ಕರೆಯುತ್ತೇವೆ. ಸೌಜನ್ಯದ ಭೇಟಿ ವೇಳೆ ಮಾತನಾಡಿರುತ್ತೇವೆ. ಅಲ್ಲಿ ಏನು ಮಾತನಾಡಿರ್ತೇವೆ ಅಂತ ನಿಮಗೆ ಗೊತ್ತಿರಲ್ಲ. ಸೋಮಣ್ಣ ಕಾರ್ಯಕ್ರಮಕ್ಕೆ ಕರೆಯಲು ಬಂದಿದ್ರು. ಇದನ್ನೇ ಪಕ್ಷ ಸೇರಲು ಮಾತುಕತೆಗೆ ಬಂದಿದ್ದಾರೆ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಆರ್ ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೊಡ್ಡ ಜವಾಬ್ದಾರಿ ಬಿಜೆಪಿ ನೀಡಿದೆ. ಸರ್ಕಾರಕ್ಕೆ ಸಲಹೆ ಕೊಟ್ಟು, ಎಚ್ಚರಿಸುವ ಕೆಲಸ ಮಾಡಲಿ. ಸರ್ಕಾರದ ತಪ್ಪು ಹೇಳುವುದು ಸ್ವಾಭಾವಿಕ. ಸತ್ಯಾಸತ್ಯತೆ ಅರಿತು ಹೇಳಿಕೆ ನೀಡಲಿ. ಸರ್ಕಾರ ಬಿಳಿಸುತ್ತೇನೆ ಅಂತ ಹೇಳುತ್ತಿದ್ದಾರೆ. 135 ಜನರನ್ನು ಆರಿಸಿ ಕಳಿಸಿದ್ದಾರೆ. ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಸರ್ಕಾರ ಬೀಳಿಸಲು ಇವರು ಯಾರು?. ಬೇರೆ ರೀತಿಯಲ್ಲಿ ಹೇಳಿಕೆ ಕೊಟ್ರೆ ಅದಕ್ಕೆ ಅರ್ಥ ಇರಲ್ಲ ಎಂದು ತಿರುಗೇಟು ನೀಡಿದರು.