ಮುಂಡಗೋಡ : ರಾಜ್ಯದ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮುಂಡಗೋಡ ಮಂಡಲದ ವತಿಯಿಂದ ಇಂದು ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ಮೂಲಕ ರಸ್ತೆ ತಡೆದು ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಮುಖಂಡರಾದ ಎಲ್.ಟಿ.ಪಾಟೀಲ, ಭರತರಾಜ ಹದಳಗಿ, ವಿಠ್ಠಲ ಬಾಳಂಬೀಡ, ಪಿ.ಜಿ.ತಂಗಚ್ಚನ್, ಬಸವರಾಜ ಟಣಕೆದಾರ, ಸಿ.ಕೆ.ಅಶೋಕ, ರೇಖಾ ಅಂಡಗಿ, ವಿಶ್ವನಾಥ ನಾಯರ, ಪ್ರಕಾಶ ಬಡಿಗೇರ, ಮಂಜು ಶೇಟ, ಶಂಕರ ಲಮಾಣಿ, ನಾಗರಾಜ ಬೆಣ್ಣಿ, ಗುರು ಕಾಮತ್, ಮನೋಜ ಬಾಡದ, ವೀರೇಶ ಕೋರಿ, ಮಂಜುನಾಥ ಬಾಡದ ಮುಂತಾದವರಿದ್ದರು.