ಮುಂಡಗೋಡ ಪೊಲೀಸರ ಭರ್ಜರಿ ಸಾಹಸl ಮನೆ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ

Spread the love

ಮುಂಡಗೋಡ : ಇಲ್ಲಿಯ ಭಾರತ ನಗರದ ಅರ್ಜುನಸಿಂಗ್ ಠಾಕೂರ್ ಅವರ ಮನೆ ಬಾಗಿಲು ಮುರಿದು, ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಹಾಗೂ ನಗದು ಹಣ 50,000 ಸೇರಿದಂತೆ ಒಟ್ಟು 1 ಲಕ್ಷ 46,500ರೂ. ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಅಕ್ಟೋಬರ್‌ 28ರಂದು ಈ ಕಳ್ಳತನದ ಘಟನೆ ಜರುಗಿತ್ತು. 

ಮುಂಡಗೋಡ ಸುಭಾಸನಗರದ ಚೇತನ್ ಪಾರ್ಗೆ (23) ಮತ್ತು ಸುಭಾಸ ನಗರದ ವಿನಾಯಕ ಭೋವಿವಡ್ಡರ್ (23) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿತರಿಂದ10 ಗ್ರಾಂ. ಬಂಗಾರದ ಚೈನ್-(ಅಂದಾಜು ಮೊತ್ತ 52,000/-ರೂ), 2.5 ಗ್ರಾಂ. ಬಂಗಾರದ ಉಂಗುರ (ಅಂದಾಜು ಮೊತ್ತ 20,500/-ರೂ) ರಿಯಲ್ ಮೀ ಪೋನ್ ( ಅಂದಾಜು ಮೊತ್ತ 19,000/-ರೂ.) ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಭೇದಿಸಲು ಉತ್ತರಕನ್ನಡ ಜಿಲ್ಲಾ ಎಸ್.ಪಿ. ನಾರಾಯಣ, ಎಡಿಶನಲ್ ಎಸ್.ಪಿ. ಸಿ.ಟಿ ಜಯಕುಮಾರ, ಎಡಿಶನಲ್ ಎಸ್.ಪಿ. ಜಗದೀಶ ಎಮ್. ಶಿರಸಿ ಡಿ.ಎಸ್.ಪಿ. ಗಣೇಶ ಕೆ.ಎಲ್. ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಸಿ.ಪಿ.ಐ. ರಂಗನಾಥ ನೀಲಮ್ಮನವರ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್ಐ ಹನಮಂತ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಮಹಾಂತೇಶ, ತಿರುಪತಿ ಚೌಡಣ್ಣವರ, ಮುಂಡಗೋಡ
ಪೊಲೀಸ್ ಠಾಣೆ ರವರು ಭಾಗವಹಿಸಿದ್ದರು. ಇವರುಗಳಿಗೆ ಜಿಲ್ಲಾ ಎಸ್.ಪಿ. ನಾರಾಯಣ ಅವರು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.