ಮುಂಡಗೋಡ : ಕೆರೆ, ಜಲಾಶಯದ ನೀರಿನ ಸಂಗ್ರಹಣೆ ಎಷ್ಟಿದೆ..?

Spread the love

ಮುಂಡಗೋಡ : ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಡಗೋಡ ತಾಲೂಕಿನ ಕೆಲವು ಕೆರೆ ಹಾಗೂ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. 

ತಾಲೂಕಿನ 11 ಕೆರೆಗಳು ಭರ್ತಿಯಾಗಿದೆ. ಇನ್ನುಳಿದ 11 ಕೆರೆಗಳಲ್ಲಿ ಶೇ.80ರಷ್ಟು ನೀರು ಸಂಗ್ರಹವಾಗಿದೆ. 

ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. 

ಇನ್ನು ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಸನವಳ್ಳಿ ಜಲಾಶಯಕ್ಕೆ ಶೇ.45ರಷ್ಟು ನೀರು ಸಂಗ್ರಹವಾಗಿದೆ. ನ್ಯಾಸರ್ಗಿ ಜಲಾಶಯದಲ್ಲಿ ಶೇ.35, ಅತ್ತಿವೇರಿ ಜಲಾಶಯದಲ್ಲಿ ಶೇ.35, ಚಿಗಳ್ಳಿ ಜಲಾಶಯದಲ್ಲಿ ಶೇ.30, ಬಾಚಣಕಿ ಜಲಾಶಯದಲ್ಲಿ ಶೇ.40, ರಾಮಾಪುರ ಜಲಾಶಯದಲ್ಲಿ ಶೇ.25ರಷ್ಟು ನೀರು ಸಂಗ್ರಹವಾಗಿದೆ.