ಶಾಲಾ ಮಕ್ಕಳಿಗೆ ‘ವಿಶೇಷ ಭೋಜನ’ ಯೋಜನೆ: ಶಿಕ್ಷಣ ಇಲಾಖೆಯಿಂದ ‘ಮಾರ್ಗಸೂಚಿ’ ಪ್ರಕಟ, ಪಾಲನೆ ಕಡ್ಡಾಯ

Spread the love

ಬೆಂಗಳೂರು: 2024-24ನೇ ಸಾಲಿನ ಪಿಎಂ ಪೋಷಣ್ ಮಧ್ಯಾಹ್ನದ ಉಪಹಾರ ಯೋಜನೆಯ ಅಡಿಯಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಯೋಜನೆ ಜಾರಿಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಅದರಲ್ಲಿ ಕೇಂದ್ರ ಸರ್ಕಾರ ಸೂಚಿತ “ವಿಶೇಷ ಭೋಜನ” (ತಿಥಿ ಭೋಜನ) ಪರಿಕಲ್ಪನೆಯು ಒಂದು ಸಮುದಾಯ ಭಾಗವಹಿಸುವಿಕೆ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎನ್ ಜಿ ಒ ಗಳು / ಕೈಗಾರಿಕೆಗಳು/ ವಾಣಿಜ್ಯ/ ವ್ಯಾಪಾರ ಇತ್ಯಾದಿ ಸಮುದಾಯದ ಸದಸ್ಯರು, ಸರ್ಕಾರಿ ಮತು ಸರ್ಕಾರಿ ಅನುದಾನಿತ ಶಾಲೆಗಳಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಬ್ಬಗಳು, ಮದುವೆ ಮದುವೆ ವಾರ್ಷಿಕೋತ್ಸವಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನಗಳು, ರಾಜ್ಯ ಸ್ಥಾಪನೆ ದಿನಗಳು, ರಾಷ್ಟ್ರೀಯ ಪ್ರಾಮುಖ್ಯತೆ ದಿನಗಳು ಮತ್ತು ಯಾವುದೇ ಇತರೆ ವಿಶೇಷ ಸಂದರ್ಭಗಳಲ್ಲಿ ಪೌಷ್ಠಿಕ ಮತ್ತು ಆರೋಗ್ಯಕರ ಊಟ/ ಆಹಾರ ಪದಾರ್ಥಗಳನ್ನು ಒದಗಿಸುವುದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಾ ಸದರಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಸಂಬಂಧ ಈ ಕೆಳಕಂಡಂತೆ ಮಾರ್ಗಸೂಚಿಯನ್ನು ನೀಡಿದೆ ಎಂದಿದ್ದಾರೆ.