
ಮುಂಡಗೋಡ : ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಹಾಗೂ ಗಾಂಧಿನಗರ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಮೂನೆ-3 ನೀಡಲು ವಿಳಂಬ ಮಾಡುತ್ತಿರುವುದರಿಂದ ನ್ಯಾಯಕ್ಕಾಗಿ ನಾಳೆ ದಿ.11ರಿಂದ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ.

ದಿ.10ರ ಒಳಗಾಗಿ ನಮೂನೆ-3 ಕೊಡದಿದ್ದರೆ ನಮೂನೆ-3 ಸಿಗುವ ತನಕ ನಾಳೆ ದಿ.11ರಿಂದ ಕಂಬಾರಗಟ್ಟಿ ಹಾಗೂ ಗಾಂಧಿನಗರ ಕೊಳಚೆ ಪ್ರದೇಶದ ನಿವಾಸಿಗಳು ಮೆರವಣಿಗೆ ಮುಖಾಂತರ ಕಂಬಾರಕಟ್ಟಿಯಿಂದ ಛತ್ರಪತಿ ಶಿವಾಜಿ ವೃತ್ತದ ಮುಖಾಂತರ ಪಟ್ಟಣ ಪಂಚಾಯತ ಕಚೇರಿಯ ಮುಂದೆ ಅನಿರ್ದಿಷ್ಟ ಅವಧಿಯವರೆಗೆ ಧರಣಿ ನಡೆಸುತ್ತೇವೆ ಎಂದು ಮುಖಂಡರಾದ ರವಿ ಹಾವೇರಿ ತಿಳಿಸಿದ್ದಾರೆ.