ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ : ಸರ್ಕಾರದಿಂದ ಮಹತ್ವದ ಆದೇಶ.!

Spread the love

ಸಂಖ್ಯೆಗೆ ಅನುಗುಣವಾಗಿ ದೃಢೀಕೃತ ದಾಖಲೆಗಳಂತೆ ಸರಬರಾಜುಗೊಳಿಸಿದ ಬಿಸಿಯೂಟಗಳಿಗೆ ಅನುಗುಣವಾಗಿ ಸಿದ್ಧಪಡಿಸಿ ಸಲ್ಲಿಸಿದ ಅಡುಗೆ ತಯಾರಿಕಾ ವೆಚ್ಚದ ಬಿಲ್ಲುಗಳನ್ನು ಆಯಾ ಶಾಲಾ ಕೇಂದ್ರಗಳ ಮುಖ್ಯಸ್ಥರಿಂದ/ನೋಡಲ್ ಶಿಕ್ಷಕರಿಂದ ದೃಢೀಕರಿಸಿಕೊಂಡು ತಾಲ್ಲೂಕು ಪಂಚಾಯಿತಿಗಳಿಗೆ ಸಲ್ಲಿಸಿ ಸದರಿ ವೆಚ್ಚಕ್ಕೆ ಹಣ ಪಾವತಿ ಪಡೆದುಕೊಳ್ಳುವುದು. ಸ್ವಯಂ ಸೇವಾ ಸಂಸ್ಥೆಯವರು ಸಲ್ಲಿಸುವ ಬಿಲ್ಲುಗಳು ಆಯಾ ಶಾಲಾ ಅಡುಗೆ ಕೇಂದ್ರಗಳ ಮುಖ್ಯ ಶಿಕ್ಷಕರು/ನೋಡಲ್ ಶಿಕ್ಷಕರು ಅಲ್ಲದೆ ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಹಾಗೂ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರ ದೃಢೀಕರಣದೊಂದಿಗೆ ಬಿಲ್ಲು ಪಾವತಿಗಾಗಿ ಸಲ್ಲಿಸಬೇಕು. ಈ ಬಿಲ್ಲುಗಳಲ್ಲಿ ಹಿಂದೆ ಚಾಲ್ತಿಯಲ್ಲಿದ್ದ (ಏಪ್ರಿಲ್ – ಮೇ 2024 ರ ಅವಧಿಯಲ್ಲಿ) ಅಡುಗೆ ತಯಾರಿಕಾ ವೆಚ್ಚದ ದರಗಳಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 1 ರಿಂದ 5 ನೇ ತರಗತಿವರೆಗೆ ರೂ 5.45 ಮತ್ತು 6 ರಿಂದ 8 ನೇ ತರಗತಿವರೆಗೆ ರೂ. 8.17 ರಂತೆ)

6) 2024 ರ ಏಪ್ರಿಲ್ – ಮೇ ತಿಂಗಳ ಬೇಸಿಗೆ ಅವಧಿಯ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶಾಲಾ ಕೇಂದ್ರಗಳಲ್ಲಿ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿತರಿಸಿದ ಬಿಸಿಯೂಟಕ್ಕಾಗಿ ಬಳಸಲಾದ 1 ರಿಂದ 8 ನೇ ತರಗತಿವರೆಗಿನ ಆಹಾರ ಧಾನ್ಯಗಳನ್ನು ಭಾರತ ಆಹಾರ ನಿಗಮದಿಂದ ಸ್ವೀಕರಿಸಿದ್ದಲ್ಲಿ ಮೊದಲ ತ್ರೈಮಾಸಿಕ ಅವಧಿಯ FCI ಬಿಲ್ಲುಗಳು ಬಾಕಿ ಇದ್ದಲ್ಲಿ (Outstanding Bills) ಬಿಡುಗಡೆಗೊಳಿಸಲಾದ ಈ ಅನುದಾನದಲ್ಲಿ ವೆಚ್ಚ ಭರಿಸುವಂತೆ ಸೂಚಿಸಿರುತ್ತದೆ.

7) ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಏಪ್ರಿಲ್ ಮತ್ತು ಮೇ 2024 ರಲ್ಲಿ ತೆರೆಯಲಾಗಿದ್ದ ಬಿಸಿಯೂಟ ವಿತರಣಾ ಶಾಲಾ ಕೇಂದ್ರಗಳು ಎಷ್ಟು ದಿನ ನಡೆದಿರುತ್ತವೆ ಹಾಗೂ ಎಷ್ಟು ಫಲಾನುಭವಿ ಮಕ್ಕಳು 1 ರಿಂದ 8 ನೇ ತರಗತಿ ಬಿಸಿಯೂಟವನ್ನು ಸ್ವೀಕರಿಸಿರುತ್ತಾರೆ ಹಾಗೂ ಹಾಜರಾದ ಶಾಲಾ ಮುಖ್ಯ ಶಿಕ್ಷಕರು / ನೋಡಲ್ ಶಿಕ್ಷಕರು ಹಾಗೂ ಹಾಜರಾಗಿ ಕೆಲಸ ನಿರ್ವಹಿಸಿದ ಅಡುಗೆ ಸಿಬ್ಬಂದಿಗಳ ಸಂಖ್ಯೆ ಮತ್ತು ವಿವರಗಳ ಸಂಖ್ಯೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಜಂಟಿಯಾಗಿ ಪರಿಶೀಲಿಸಿ ಸಂಬಂಧಿಸಿದ ಕ್ಲಸ್ಟರ್ ಹಂತದಲ್ಲಿ CRP/ECO ರವರಿಂದ ದೃಢೀಕೃತ ಮಾಹಿತಿ ಪಡೆದು ದಾಖಲೆಗಳನ್ನು ಹೊಂದಿರಬೇಕು ಹಾಗೂ ಈ ದಾಖಲೆಗಳನ್ನು ಆಧರಿಸಿ, ಖಾತ್ರಿಪಡಿಸಿಕೊಂಡು ಬಿಡುಗಡೆ ಮಾಡಿರುವ ಅನುದಾನದ ವೆಚ್ಚ ಭರಿಸತಕ್ಕದ್ದು ಹಾಗೂ ತಾಲ್ಲೂಕು ಪಂಚಾಯಿತಿ ಹಂತದಲ್ಲಿ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಸೂಕ್ತ ದಾಖಲೆಗಳೊಂದಿಗೆ ಅನುದಾನದ ವೆಚ್ಚ ವಿವರಗಳನ್ನು ನಿರ್ವಹಿಸುವುದು.

8) ಬರಗಾಲ ಪೀಡಿತ 223 ತಾಲ್ಲೂಕುಗಳ ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಇವರು ಖುದ್ದಾಗಿ ಬರಗಾಲ ಪೀಡಿತ ತಾಲ್ಲೂಕುಗಳಲ್ಲಿ ಅನುದಾನ ಬಿಡುಗಡೆ, ಬಳಕೆ ಮತ್ತು ಸಂಬಂಧಿಸಿದ ಲೆಕ್ಕ ವಿವರಗಳ ಬಗ್ಗೆ ಸೂಕ್ತ ಮೇಲ್ಪಚಾರಣೆ ಕೈಗೊಂಡು ಯಾವುದೇ ತಕರಾರು ಬರದಂತೆ ಅಗತ್ಯ ಕ್ರಮವಹಿಸಿ ಅನುದಾನ ಪೂರ್ಣ ಬಳಕೆಯ ವರದಿಯನ್ನು ರಾಜ್ಯ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ.