ಬೈಕಿಗೆ ಟಾಟಾಎಸ್ಸಿ ಡಿಕ್ಕಿ : ಸವಾರನಿಗೆ ತೀವ್ರ ಗಾಯ

Spread the love

ಮುಂಡಗೋಡ : ಟಾಟಾಎಸ್ಸಿ ವಾಹನೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಹನುಮಾಪುರದ ಕಿರಣ ವಡ್ಡರ್ (24) ಗಾಯಗೊಂಡಿದ್ದಾರೆ.

ಹನುಮಾಪುರದಿಂದ ಕಾತೂರು ಕಡೆ ಟಾಟಾಎಸ್ಸಿ ವಾಹನ ಓಡಿಸಿಕೊಂಡು ಹೋಗುತ್ತಿದ್ದ ಹಾವೇರಿಯ ಬಸವರಾಜ ಕತ್ತಿ ಎಂಬಾತ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ಕಿರಣ ವಡ್ಡರ್’ಗೆ ಗುದ್ದಿದ್ದು, ಬೈಕ್‌ಸಹಿತ ನೆಲಕ್ಕೆ ಬಿದ್ದ ಕಿರಣ್ ತಲೆ ಹಾಗೂ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣನಾದ ಬಸವರಾಜನ ವಿರುದ್ಧ ಕಿರಣನ ಪತ್ನಿ ಪೊಲೀಸ್ ದೂರು ನೀಡಿದ್ದಾರೆ.