ಕೋಡಂಬಿಯಲ್ಲಿ 11 ಗಂಧದ ಮರ ಕಡಿದು ಸಾಗಿಸಿದ ಕಳ್ಳರು..! 15 ಮರ ಕಟಾವ್ ಮಾಡಿ ಅಲ್ಲೇ ಬಿಟ್ಟು ಹೋದರು..!!

Spread the love

ಮುಂಡಗೋಡ : ತಾಲೂಕಿನ ಕೋಡಂಬಿ ಗ್ರಾಮದ ಪರಶುರಾಮ ಕಟ್ಟಿಮನಿ ಎಂಬುವರ ಹೊಲದಲ್ಲಿ 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಂಧದ ಗಿಡಗಳಲ್ಲಿ 11 ಗಂಧದ ಮರಗಳನ್ನು ಕಳ್ಳರು ಕಡಿದು ಸಾಗಿಸಿದ ಘಟನೆ ನಡೆದಿದೆ. 

ಇನ್ನೂ 15 ಮರಗಳನ್ನು ಕಟಾವು ಮಾಡಿದ ಕಳ್ಳರು ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಪರಶುರಾಮ ಅವರಿಗೆ 2 ಲಕ್ಷ ರೂ ನಷ್ಟವಾಗಿದೆ ಎನ್ನಲಾಗಿದೆ.
ಕಳ್ಳತನದ ಬಗ್ಗೆ ಇಷ್ಟು ದಿನಗಳ ಕಾಲ ಸಂಬಂಧಿಕರ ಬಳಿ ಚರ್ಚೆ ನಡೆಸಿದ ನಂತರ ಪರಶುರಾಮ ಅವರು ಇದೀಗ ಕಳ್ಳರನ್ನು ಹಿಡಿಯುವಂತೆ ಪೊಲೀಸ್ ದೂರು ನೀಡಿದ್ದಾರೆ.