ಮುಂಡಗೋಡ : ನವಚೇತನ ಯುವಕ ಮಂಡಳ ಟ್ರಸ್ಟ್ ಆಶ್ರಯದಲ್ಲಿ ದಿ.24ರಂದು ಸಂಜೆ 4-30 ಗಂಟೆಗೆ ವಿವೇಕಾನಂದ ಬಯಲು ರಂಗ ಮಂದಿರದಲ್ಲಿ ಬಾಲಕೃಷ್ಣನ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ ಏರ್ಪಡಿಸಲಾಗಿದೆ.
ಪಾಲಕ, ಪೋಷಕರು ತಮ್ಮ ಮಗುವಿನ ಹಾಗೂ ತಾಯಿಯ ಹೆಸರನ್ನು ಮುಂಚಿತವಾಗಿ ನೋಂದಾಯಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ಮುಂಚಿತವಾಗಿ ಹೆಸರನ್ನು ಶ್ರೀಮಾತಾಜಿ ಮೊಬೈಲ್ಸ್ ಯಲ್ಲಾಪುರ ರಸ್ತೆ, ಮುಂಡಗೋಡ (7676757597), ಲಕ್ಷ್ಮಿ ಕ್ಲಿನಿಕಲ್ ಲ್ಯಾಬ್ ಯಲ್ಲಾಪುರ ರಸ್ತೆ ಮುಂಡಗೋಡ (9448571171) ಇವರಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.
ಬಾಲಕೃಷ್ಣ ರೂಪಕ ಸ್ಪರ್ಧೆಗೆ ಕಿರಿಯರ ವಿಭಾಗ 0-3 ವರ್ಷದೊಳಗಿನ ಮಕ್ಕಳಿಗೆ ಮತ್ತು ಹಿರಿಯರ ವಿಭಾಗ 3-6 ವರ್ಷದೊಳಗಿನ ಮಕ್ಕಳಿಗಾಗಿ ಭಾಗವಹಿಸುವ ಮಕ್ಕಳ ಜನ್ಮ ದಾಖಲೆ ಮತ್ತು 100ರೂ. ಪ್ರವೇಶಧನ, ಸ್ಪರ್ಧಿಗಳ ಹೊರತಾಗಿ ಸಹ ಕಲಾವಿದರಿಗೆ
ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಯಶೋಧಾಮಯ್ಯ ರೂಪಕ ಸ್ಪರ್ಧೆಗೆ 200ರೂ. ಪ್ರವೇಶಧನ,ಯಶೋಧಾಮಯ್ಯ ರೂಪಕ ಸ್ಪರ್ಧೆಯಲ್ಲಿ ತಮ್ಮದೇ ಮಗು ಅಥವಾ ಪರಿಚಯಸ್ಥರ ಮಗುವಿನೊಂದಿಗೆ ಭಾಗವಹಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನವಚೇತನ ಯುವಕ ಮಂಡಳ ಟ್ರಸ್ಟನ ಅಧ್ಯಕ್ಷರಾದ ಮಾರುತಿ ಓಂಕಾರ(9743933566) ಹಾಗೂ ಬಾಲಕೃಷ್ಣನ ರೂಪಕ ಸ್ಪರ್ಧೆ ಸಮಿತಿ ವ್ಯವಸ್ಥಾಪಕರಾದ ಡಾ.ಕಿರಣ ಹುಲಗೂರ ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.