ಅರಣ್ಯ ಸಚಿವರ ಟಿಪ್ಪಣೆ : ಸುಪ್ರೀಂ ಕೋರ್ಟ ಆದೇಶ ಮತ್ತು ಕಾನೂನು ಉಲ್ಲಂಘನೆ- ರವೀಂದ್ರ ನಾಯ್ಕ

Spread the love

ಭಟ್ಕಳ: ಅನಧಿಕೃತ ಅರಣ್ಯ ವಾಸಿಗಳನ್ನ ಒಕ್ಕಲೆಬ್ಬೀಸುವ ಮಾನದಂಡ ೨೦೧೫ ಕ್ಕೆ ನಿಗದಿಗೊಳಿಸಿ ಇತ್ತೀಚಿಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹೊರಡಿಸಿದ ಟಿಪ್ಪಣೆಯ ಆದೇಶ ಸುಪ್ರೀಂ ಕೋರ್ಟ ಮತ್ತು ಕಾನೂನು ಉಲ್ಲಂಘನೆ ಆಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಸಚಿವರ ಟಿಪ್ಪಣೆಯ ಆದೇಶವನ್ನು ಟೀಕಿಸಿದ್ದಾರೆ.

ಅವರು ಇಂದು ಭಟ್ಕಳ ತಾಲೂಕಿನ ಅರಣ್ಯ ವಾಸಿಗಳ ಸಭೆಯನ್ನು ಉಧ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ದೇಶದಲ್ಲಿ ಇಂದು, ಅರಣ್ಯ ಸಂರಕ್ಷಣಾ ಕಾಯಿದೆ ೧೯೮೦ ಅಡಿಯಲ್ಲಿ, ೧೯೭೮ ರ ನಂತರ ಹಾಗೂ ಅರಣ್ಯ ಹಕ್ಕು ಕಾಯಿದೆಯಂತೆ ಡಿಸೆಂಬರ ೧೩, ೨೦೦೫ ರ ನಂತರ ಅತಿಕ್ರಮಣ ಮಂಜೂರಿಗೆ  ಕಾನೂನು ಜಾರಿಯಲ್ಲಿ ಇಲ್ಲ. ಅಲ್ಲದೇ ನಿರ್ಭಂಧವಿದೆ. ಇದನ್ನು ಸುಪ್ರೀಂ ಕೋರ್ಟ ಸಹಿತ ನಿರ್ಭಂಧಿಸಿದೆ. ಆದರೇ, ಅಗಸ್ಟ ೨ ರ ಸಚಿವರ ಆದೇಶ ನಿಗದಿಗೋಳಿಸಿದ ೨೦೧೫ ರವರೆಗಿನ ಅವಧಿಗೆ ಯಾವೂದೇ ಅತಿಕ್ರಮಣ ಮಾಡಲೂ ಕಾನೂನಲ್ಲಿ ಮಾನ್ಯತೆ ಇಲ್ಲ ಎಂದು ಅವರು ಹೇಳಿದರು.
 ಸಭೆಯಲ್ಲಿ ಪದಾಧಿಕಾರಿಗಳಾದ ಪಾಂಡು ನಾಯ್ಕ ಬೆಳಕೆ, ದೇವರಾಜ ಗೊಂಡಾ, ಮಂಜುನಾಥ ಮರಾಠಿ, ಶಬ್ಬೀರ್, ಚಂದ್ರು ನಾಯ್ಕ ಗೊರಟೆ, ದೇವೇಂದ್ರ ಮರಾಠಿ ಹೆಜ್ಜೆಲ್, ಕಯುಂ ಕೊಲ, ಎಸ್ ಕೆ ಮನ್ಸುರ್, ಚೇತನ ಮರಾಠಿ ಮುಂತಾದವವರು ಸಭೆಯಲ್ಲಿ ಮಾತನಾಡಿದರು.

ಸಂಘಟನೆಗೆ ಬಲ:
ಅರಣ್ಯ ವಾಸಿಗಳ ಸಮಸ್ಯೆಗಳಿಗೆ ನಿರಂತರ ೩೩ ವರ್ಷದ ಹೋರಾಟಕ್ಕೆ, ಮುಂದಿನ ದಿನಗಳಲ್ಲಿ ಸಂಘಟನಾ ಬಲ ಹೆಚ್ಚಿಸುವ ನಿರ್ಣಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಅದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.