Headlines

ಗೃಹಲಕ್ಷ್ಮಿ ಹಣದಿಂದ ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿ‌ಕೊಟ್ಟ ಅತ್ತೆ..!

Spread the love

ಹಾವೇರಿ : ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದಾಗ ರಾಜ್ಯಾದ್ಯಂತ ಪರ-ವಿರೋಧ ತೀವ್ರ ಚರ್ಚೆಗೆ ಹುಟ್ಟುಹಾಕಿತ್ತು. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನತಿಗೆ ಮಾಸಿಕ ಎರಡು ಸಾವಿರ ಕೊಡುವುದರಿಂದ ಮನೆಯಲ್ಲಿ ಅತ್ತೆ ಸೊಸೆ ಮಧ್ಯೆ ಜಗಳಕ್ಕೆ ಕಾರಣವಾಗುತ್ತದೆ. ಕುಟುಂಬಗಳು ಹೊಡೆದಾಡಿಕೊಂಡು ಬೀದಿಗೆ ಬೀಳುತ್ತವೆ ಎಂದು ವಿರೋಧ ಪಕ್ಷಗಳು ಟೀಕಿಸಿದವು. ಅದ್ಯಾವುದು ಆಗಲಿಲ್ಲ. ಬದಲಾಗಿ ಗೃಹಲಕ್ಷ್ಮೀ ಹಣವನ್ನ ಕೂಡಿಟ್ಟು ಅತ್ತೆಯೇ ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟ ಅಪರೂಪದ ಘಟನೆಗೆ ಹಾವೇರಿ ಜಿಲ್ಲೆ ಸಾಕ್ಷಿಯಾಗಿ, ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. 

ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದವರಾದ ಅತ್ತೆ ದಾಕ್ಷಾಯಿಣಿ. ತನ್ನ ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಸೊಸೆ ಹೊರಗಡೆ ಕೆಲಸಕ್ಕೆ ಹೋಗಬಾರದು ಮನೆಯಿಂದಲೇ ಏನಾದರೂ ಕೆಲಸ ಮಾಡುವಂತಾಗಬೇಕು ಎಂದು ಯೋಚಿಸಿದ್ದ ಅತ್ತೆ ದಾಕ್ಷಾಯಿಣಿ. ಅದೇ ವೇಳೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಪ್ರತಿ ತಿಂಗಳು 2000 ಸಾವಿರ ರೂಪಾಯಿ ಬರಲಾರಂಭಿಸಿದ ಬಂದ ಹಣವನ್ನು ಖರ್ಚು ಮಾಡದೇ ಹಾಗೆ ಕೂಡಿಟ್ಟಿರುವ ಅತ್ತೆ ಇದೀಗ ಇಂದಿಗೆ ಹತ್ತು ತಿಂಗಳ ಕಂತಿನ ಗೃಹಲಕ್ಷ್ಮೀ ಹಣ ಒಟ್ಟು 20,000 ರೂ. ಆಗಿದೆ. ಗೃಹಲಕ್ಷ್ಮೀ ಹಣದಿಂದ ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿರುವ ಅತ್ತೆ. ಶ್ರಾವಣ ಮಂಗಳವಾರದ ಮಂಗಳಕರ ದಿನದಂದೇ ಪೂಜೆ ಕಾರ್ಯ ನೆರವೇರಿಸಿ ಫ್ಯಾನ್ಸಿ ಸ್ಟೋರ್‌ಗೆ ಚಾಲನೆ ನೀಡಿರುವ ಅತ್ತೆ. ಅತ್ತೆಯ ಕಾರ್ಯಕ್ಕೆ ಗ್ರಾಮಸ್ಥರು ಬೇಷ್  ಎಂದಿದ್ದಾರೆ. ಪ್ರತಿ ಕುಟುಂಬದಲ್ಲೂ ಇಂತಹ ಅತ್ತೆ-ಸೊಸೆ ಇದ್ದರೆ ಮನೆ ನಂದಗೋಕಲವಾಗುವುದರಲ್ಲಿ ಅನುಮಾನವಿಲ್ಲ.