ಬೆಂಗಳೂರು : ಡಾ.ರಾಜಕುಮಾರ ಅಭಿನಯದ ಕೆರಳಿದ ಸಿಂಹ ಚಿತ್ರವನ್ನು ನಿರ್ದೇಶಿಸಿ ಚಿತ್ರಪ್ರೇಮಿಗಳ ಅಪಾರ ಮೆಚ್ಚುಗೆ ಗಳಿಸಿದ್ದ ಕನ್ನಡದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ದತ್ತರಾಜ್ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಚಿ.ದತ್ತರಾಜ್, ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ ಆಗಿದ್ದರು.
ಡಾ.ರಾಜಕುಮಾರ್ ಅಭಿನಯದ ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು.