ಬೆಂಗಳೂರು : ಇಂದು ಶಾಸಕರ ಭವನ ಬೆಂಗಳೂರಿನಲ್ಲಿ ವಿಶ್ವ ರೈತ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಚರಿಸಲಾಯಿತು.
ಬೆಂಗಳೂರು ಉತ್ತರ ಜಿಲ್ಲಾ ಮತ್ತು ಬಿಬಿಎಂಪಿ ಮಾಜಿ ಉಪಾಧ್ಯಕ್ಷರಾದ ಎಸ್.ಹರೀಶ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಚಿದಾನಂದ ಹರಿಜನ, ರಾಜ್ಯ ಗೌರವಾಧ್ಯಕ್ಷರಾದ ರವಿ ಜಿ.ಟಿ., ಬಿಜೆಪಿ ಮಹಾಲಕ್ಷ್ಮಿ ಲೇಔಟ್ ಕೋರ್ ಕಮಿಟಿ ಅಧ್ಯಕ್ಷರಾದ ಆರ್.ನಾರಾಯಣ, ರಾಜ್ಯ ಕಾನೂನು ಸಲಹೆಗಾರರಾದ ಅಮರೇಶ ಹರಿಜನ, ಉಮೇಶ್ ಹುಬ್ಬಳ್ಳಿ, ಜಯಸಿಂಹ ಬೆಂಗಳೂರು, ವೆಂಕಟೇಶ್ ಬೆಂಗಳೂರು, ಶ್ರೀನಿವಾಸನ್ ಬೆಂಗಳೂರು ಮತ್ತು ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಣ್ಯರಿಗೆ ಸನ್ಮಾನಿಸಲಾಯಿತು, ಮತ್ತು ಯುವ ಕುಸ್ತಿಪಟು ಗಂಗಾಧರ ರಾಥೋಡ್ ಅವರನ್ನು ಸನ್ಮಾನಿಸಲಾಯಿತು. ಹಲವು ಬೇಡಿಕೆಗಳ ಈಡೇರಿಕೆಗಾಗಿ, ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.