ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಲೋಕಾಯುಕ್ತ ವರದಿಯಲ್ಲಿ ಒಂದು ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಅಧಿಕಾರಿ ಸರ್ಚ್ ವಾರೆಂಟ್ ಹೊರಡಿಸಿದಾಗ ಡಿವೈಎಸ್ಪಿ ಮಾಲತೇಶ್ ಮುಡಾ ಕಚೇರಿಗೆ ಬಂದು 144 ಕಡತಗಳನ್ನು ತೆಗೆದುಕೊಂಡು ಹೋಗಿರುವ ವಿಚಾರವಾಗಿ, ವಿಪಕ್ಷ ನಾಯಕ ಆರ್. ಅಶೋಕ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಐಎಎಸ್ ಅಧಿಕಾರಿ ಫೈಲ್ ತಗೊಂಡು ಹೋಗಿದ್ದು ದಿಗ್ಭ್ರಮೆ ಮೂಡಿಸಿದೆ. ಬೈರತಿ ಸುರೇಶ್ ಇನ್ನು ಎಷ್ಟು ಫೈಲ್ಗಳನ್ನು ತಗೊಂಡು ಹೋದರೋ ಗೊತ್ತಿಲ್ಲ. ಅದಕ್ಕೂ ಮುಂಚೆ ಅಧಿಕಾರಿ ಮುಡಾ ಫೈಲ್ ತೆಗೆದುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಬಂದಿದೆ ಅಂತ ನೋಡಿ. ಮುಡಾ ಅಕ್ರಮ ರಕ್ಷಣೆಗೆ ಅಧಿಕಾರಿಗಳೇ ಮುಂದಾಗಿರುವುದು ಸರಿಯಲ್ಲ. ಈ ಪ್ರಕರಣ ಸಿಬಿಐ ತನಿಖೆಗೆ ಕೊಡಬೇಕು ಅಂತ ಆಗ್ರಹಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು.
ಉಪಚುನಾವಣಾ ಫಲಿತಾಂಶ ಪಕ್ಷದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ನಮ್ಮ ಸರ್ಕಾರ ಇದ್ದಾಗ 18 ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದಿದ್ದೆವು. ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಸೋತೆವು. ಈ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಅಕ್ರಮಗಳಿಗೆ ಕ್ಲೀನ್ ಚಿಟ್ ಅಲ್ಲ. ಅದೇ ಬೇರೆ ಇದೆ ಬೇರೆ ಬೈ ಎಲೆಕ್ಷನ್ ಲೋಕಲ್ ವಿಚಾರಗಳ ಮೇಲೆ ನಡೆದಿದೆ. ಉಪಚುನಾವಣೆಯ ಫಲಿತಾಂಶ ಇಡೀ ರಾಜ್ಯದ ಜನರು ನೀಡಿರುವಂತಹ ತೀರ್ಪು ಅಲ್ಲ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದರು.