MUNDAGOD: Head of the Tibetan Administration in Dharamshala, Himachal Pradesh, Sikyong Pempa Tsiring, received a warm welcome when he visited the Mundagod Tibetan Colony on Tuesday.
Sikyong Pempa Tsiring will be staying at the Mundagod Tibetan Colony for five days to attend the enthronement ceremony of the 105th Gaden Tripa, the supreme head of the Gelugpa sect of the Tibetan Buddhist tradition.
Sikyong Pempa Tsiring will listen to Tibetans’ dire needs. He will also visit Buddhist monasteries, schools, hospitals, cooperatives, old age homes.
ಮುಂಡಗೋಡ ಟಿಬೆಟಿಕಾಲೋನಿಗೆ ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಆಗಮನ
ಮುಂಡಗೋಡ : ಹಿಮಾಚಲ ಪ್ರದೇಶದ ಧರ್ಮಶಾಲದಲ್ಲಿರುವ ಟಿಬೆಟಿಯನ್ ಆಡಳಿತದ ಮುಖ್ಯಸ್ಥರಾದ ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಅವರು ಮಂಗಳವಾರ ಮುಂಡಗೋಡ ಟಿಬೆಟಿ ಕಾಲೋನಿಗೆ ಭೇಟಿ ನೀಡಿದಾಗ ಅವರನ್ನು ಆದರದಿಂದ ಸ್ವಾಗತಿಸಲಾಯಿತು.
ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಅವರು ಐದು ದಿನಗಳ ಕಾಲ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ವಾಸ್ತವ್ಯ ಮಾಡಲಿದ್ದು, ಅವರು ಟಿಬೆಟಿಯನ್ ಬೌದ್ಧ ಸಂಪ್ರದಾಯದ ಗೆಲುಗ್ಪಾ ಪಂಥದ ಸರ್ವೋಚ್ಚ ಮುಖ್ಯಸ್ಥ 105ನೇ ಗಾಡೆನ್ ಟ್ರಿಪಾ ಅವರ ಸಿಂಹಾಸನರೋಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಅವರು ಟಿಬೆಟಿಯನ್ನರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಅಲ್ಲದೇ ಬೌದ್ಧಮಠಗಳಿಗೆ, ಶಾಲೆಗಳಿಗೆ, ಆಸ್ಪತ್ರೆಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ವೃದ್ಧಾಶ್ರಮಗಳಿಗೆ, ಭೇಟಿ ನೀಡಲಿದ್ದಾರೆ.