ಮುಂಡಗೋಡ : ತಾಲೂಕಿನ ಓಣಿಕೇರಿಯ ಮಾರುತಿ ದೇವಸ್ಥಾನದ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಪೊಲೀಸರಿಗೆ 52 ಇಸ್ಪಿಟ್ ಎಲೆಗಳ ಜೊತೆ ಅಲ್ಲಿ ಹರಡಿಕೊಂಡಿದ್ದ 7400ರೂ ಹಣ ಸಿಕ್ಕಿದೆ.
ಬೆಳಗಾವಿಯಲ್ಲಿ ಬಂಗಾರದ ಕೆಲಸ ಮಾಡುವ ಅರುಣ ಅಕ್ಕಸಾಲಿಗ ಜನವರಿ 14ರಂದು ರಾತ್ರಿ 8 ಗಂಟೆಗೆ ಅಂದರ್ ಬಾಹರ್ ಆಟಕ್ಕೆ ಆಮಂತ್ರಿಸಿದ್ದರು. ಅದರ ಪ್ರಕಾರ ಓಣಿಕೇರಿಯ ಚಾಲಕ ಸೋಮನಗೌಡ ಪಾಟೀಲ, ಕೂಲಿ ಕೆಲಸ ಮಾಡುವ ಸಂತೋಷ ಬಾಳಂಬೀಡ, ಪಾಂಡುರಂಗ ಕೋಣನಕೇರಿ ಹಾಗೂ ಬುಡ್ಡೆಸಾಬ ಮುನಿಯಾರ ಅಲ್ಲಿಗೆ ಬಂದಿದ್ದರು.
ಎಲ್ಲರೂ ಸೇರಿ ಇಸ್ಪಿಟ್ ಆಡುತ್ತಿರುವಾಗ ಪಿಎಸ್‌ಐ ಪರಶುರಾಮ ಮಿರ್ಜಗಿ ದಾಳಿ ಮಾಡಿದರು. ಪೊಲೀಸರನ್ನು ನೋಡಿದ ಪಾಂಡುರoಗ ಕೋಣನಕೇರಿ ಹಾಗೂ ಬುಡ್ಡೆಸಾಬ ಮುನಿಯಾರ ಓಡಿ ಪರಾರಿಯಾದರು. ಉಳಿದ ಮೂವರು ಸಿಕ್ಕಿ ಬಿದ್ದರು. ಇಸ್ಪಿಟ್ ಸಲಕರಣೆ ಹಾಗೂ ಹಣ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದರು. ಸಿಕ್ಕಿ ಬಿದ್ದವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.