ಸಾಲಗಾಂವ ಕೆರೆಯಲ್ಲಿ ಮೀನು ಹಿಡಿಯಲು ಇಳಿದಿದ್ದವನ ಸಾವು..!

Spread the love

ಮುಂಡಗೋಡ : ಮೀನು ಹಿಡಿಯಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಾಲಗಾಂವ ಕೆರೆಯಲ್ಲಿ ನಡೆದಿದೆ.  

ಗ್ರಾಮಸ್ಥರ ಸಹಕಾರದಿಂದ ಮುಂಡಗೋಡ ಪಿಎಸ್‌ಐ ಪರಶುರಾಮ ಮಿರ್ಜಗಿ ಕೆರೆಯಲ್ಲಿ ಇಳಿದು ವ್ಯಕ್ತಿಯ ಶವ ಹೊರತೆಗೆದಿದ್ದಾರೆ.
ಗುಡ್ಡಪ್ಪ ಜಾಡರ್(58) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈತ ಶನಿವಾರ ಮೀನು ಹಿಡಿಯಲು ಕೆರೆಯಲ್ಲಿ ಇಳಿದಿದ್ದ. ಈ ವೇಳೆ ಕೆರೆಯ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದನು.