ಬೆಂಗಳೂರು: ದೆಹಲಿ ವಿಧಾನಸಭೆ ರಿಸಲ್ಟ್ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿಗೆ ಗ್ರೀನ್ ಸಿಗ್ನಲ್ ಸಿಗಲಿದೆ. ವಿಜಯೇಂದ್ರ ಮುಂದುವರಿಯಬೇಕಾ? ಬೇಡ್ವಾ ಎಂಬುದನ್ನ ಪ್ರಧಾನಿ ನರೇಂದ್ರ ಮೋದಿಯೇ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯ ಬಿಜೆಪಿ (BJP) ಚೂರುಚೂರಾಗಿ ಬಣಗಳ ರಗಳೆ ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತಂದಿದ್ದು, ಗೊಂದಲ ಹೆಚ್ಚಾಗಿರುವ ಕಾರಣ ರಾಷ್ಟ್ರೀಯ ಬಿಜೆಪಿ ನಾಯಕರು ಮೋದಿ ತೀರ್ಮಾನಕ್ಕೆ ಬಿಟ್ಟಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ.