ಮುಂಡಗೋಡ : ಕಳೆದ 45 ವರ್ಷಗಳಿಂದ ಎಣ್ಣೆಯಿಲ್ಲದೆ ಉರಿಯುತ್ತಿದ್ದ ಮೂರು ಚಮತ್ಕಾರಿ ದೀಪಗಳು ಬುಧವಾರ ಆರಿ ಹೋದ ಬಗ್ಗೆ ದಟ್ಟವಾದ ವದಂತಿಗಳು ಎಲ್ಲೆಡೆ ಹಬ್ಬಿದೆ. ಆದರೆ ಈವರೆಗೂ ಈ ವಿಷಯವನ್ನು ಅಧಿಕೃತಗೊಳಿಸಿಲ್ಲ.
ಈ ದೀಪವಿರುವ ದೀಪನಾಥೇಶ್ವರ ದೇವಸ್ಥಾನದ ಆಡಳಿತ ಕಮಿಟಿಯವರು ಈ ಬಗ್ಗೆ ಖಚಿತ ಮಾಹಿತಿ ನೀಡಬೇಕಾಗಿದೆ. ಕಳೆದ 14 ದಿನಗಳ ಹಿಂದೆ ಇದೇ ದೀಪನಾಥೇಶ್ವರ ದೇವಸ್ಥಾನದ ಅರ್ಚಕರು ಹಾಗೂ 45 ವರ್ಷಗಳ ಹಿಂದೆ ದೀಪ ಹಚ್ಚಿದ ಅಜ್ಜಿ ಶಾರದಾಬಾಯಿ ಅವರ ಸಾಕು ಮಕ್ಕಳಾದ ವೆಂಕಟೇಶ ರಾಯ್ಕರ್ ನಿಧನರಾಗಿದ್ದರು. ಇದರಿಂದಾಗಿ ಕಳೆದ 14 ದಿನಗಳಿಂದ ದೇವಸ್ಥಾನದ ಬಾಗಿಲು ತೆರೆದಿರಲಿಲ್ಲ ಎಂದು ಹೇಳಲಾಗಿದೆ. ಬುಧವಾರ ಬಾಗಿಲು ತೆರೆದು ನೋಡಿದಾಗ ದೀಪಗಳು ಆರಿ ಹೋಗಿದ್ದು ಕಂಡುಬಂದಿದೆ ಎಂದು ಹೇಳಲಾಗುತ್ತದೆ. ದೀಪನಾಥೇಶ್ವರ ದೇವಸ್ಥಾನದ ಆಡಳಿತ ಕಮಿಟಿಯವರ ಅಧಿಕೃತ ಮಾಹಿತಿ ಬಗ್ಗೆ ಜನರು ಈಗ ಕಾತರದಿಂದ ಕಾಯುತ್ತಿದ್ದಾರೆ.
ಚಿಗಳ್ಳಿಯಲ್ಲಿ ಮೂರು ಚಮತ್ಕಾರಿ ದೀಪಗಳು ನಿರಂತರವಾಗಿ ಉರಿಯುತ್ತಿದ್ದ ಪ್ರತೀತಿಯಿದ್ದು, ಇದನ್ನು ನೋಡಲು ದೇಶ ವಿದೇಶಗಳಿಂದ ಜನರು ಬರುತ್ತಿದ್ದರು.