ಮೂವರು ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ

Spread the love

ಮುಂಡಗೋಡ : ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮೂವರು ಚಿಕ್ಕ ಮಕ್ಕಳಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ಎಂದು ಪಟ್ಟಣದಲ್ಲಿ ರವಿವಾರ ನಡೆದಿದೆ. 

ಪಟ್ಟಣದ ಕಿಲ್ಲೆ ಓಣಿಯ ಸಮೀರ ನಿಗೋಣಿ ಎಂಬುವರ ಆರು ವರ್ಷದ ಮಗ ಶಾದಾಬ, ಲಮಾಣಿ ತಾಂಡಾದ ನಾಲ್ಕು ವರ್ಷದ ಅನನ್ಯ ಲಮಾಣಿ ಹಾಗೂ ಕಿಲ್ಲೆ ಓಣಿಯ ಮತ್ತೊಬ್ಬ ಬಾಲಕನಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ.
ನಾಯಿಯಿಂದ ಗಾಯಗೊಂಡವರನ್ನು ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಶಾದಾಬ ನಿಗೋಣಿ ಹಾಗೂ ಅನನ್ಯ ಲಮಾಣಿ ಅವರಿಗೆ ನಾಯಿ ತೀವ್ರ ಗಾಯಗೊಳಿಸಿದ್ದರಿಂದ ಈ ಎರಡೂ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ಬರೆದು ಕೊಟ್ಟಿದ್ದರಿಂದ ಮಕ್ಕಳ ಪಾಲಕರು ತೀವ್ರ ಚಿಂತೆ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಬಾಲಕನಿಗೆ ಸಣ್ಣ ಪ್ರಮಾಣದಲ್ಲಿ ನಾಯಿ ಗಾಯಗೊಳಿಸಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಸಲಹೆ, ಸೂಚನೆಗಳನ್ನು ವೈದ್ಯರು ನೀಡಿದ್ದಾರೆ ಎನ್ನಲಾಗಿದೆ. 

ಸಾರ್ವಜನಿಕರ ಆಗ್ರಹ :
ಪಟ್ಟಣ ಪಂಚಾಯತಿಯವರು ಅದರಲ್ಲೂ ವಿಶೇಷವಾಗಿ ಪಟ್ಟಣ ಪಂಚಾಯತ ಸದಸ್ಯರು ಹುಚ್ಚು ನಾಯಿಗಳನ್ನು ಹಾಗೂ ಬೀದಿ ನಾಯಿಗಳನ್ನು ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಿತ್ರ : ನಜೀರುದ್ಧೀನ್ ತಾಡಪತ್ರಿ