
ಮುಂಡಗೋಡ : ತಾಲೂಕಾ ಆಡಳಿತ, ತಾಲೂಕ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಆಶ್ರಯದಲ್ಲಿ ಶನಿವಾರ ತಾಲೂಕಾ ಆಡಳಿತ ಸೌಧದ ಸಭಾಭವನದಲ್ಲಿ ಸಂತ ಶ್ರೀ ಸೇವಾಲಾಲ್ 286ನೇ ಜಯಂತಿ ಕಾರ್ಯಕ್ರಮ ನಡೆಯಿತು.

ಸಂತ ಶ್ರೀ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಪುಷ್ಪ ನಮನ ಸಲ್ಲಿಸಲಾಯಿತು.
ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ್ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಂಜಾರ ಸಮಾಜದ ತಾಲೂಕಾ ಅಧ್ಯಕ್ಷರಾದ ರಾಮಣ್ಣ ಲಮಾಣಿ, ಪ.ಪಂ.ಮುಖ್ಯಾಧಿಕಾರಿ ಚಂದ್ರಶೇಖರ್, ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಕೃಷ್ಣ ಕುಳ್ಳೂರ, ಆರ್.ಬಿ.ಕರೂರ, ವಿನೋದ ರಾಠೋಡ, L.S.M.P. ಸೊಸೈಟಿ ಉಪಾಧ್ಯಕ್ಷರಾದ ಸೋಮಲಪ್ಪ ಲಮಾಣಿ, ಬಂಜಾರ ಸಮಾಜದ ಮಹಿಳಾ ಜಿಲ್ಲಾಧ್ಯಕ್ಷೆ ಶಾರದಾ ರಾಠೋಡ, ಪ.ಪಂ.ಸದಸ್ಯ ಶೇಖರ ಲಮಾಣಿ, ಅಧಿಕಾರಿಗಳು, ಬಂಜಾರ ಸಮಾಜದ ಪ್ರಮುಖರು ಮುಂತಾದವರಿದ್ದರು.
ಶಿಕ್ಷಕರಾದ ವಸಂತ ರಾಠೋಡ ಉಪನ್ಯಾಸ ನೀಡಿದರು. ಆರಂಭದಲ್ಲಿ ಡಿ.ಟಿ.ಲಮಾಣಿ ಸ್ವಾಗತಿಸಿದರು. ಈಶ್ವರ ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಉಪತಹಶೀಲದಾರ ಜಿ.ಬಿ.ಭಟ್ ವಂದಿಸಿದರು.
