
ಮುಂಡಗೋಡ : ಹೊಟೇಲ ಶಂಕರ ನಾರಾಯಣದಲ್ಲಿ ಉಪಹಾರ ಸೇವಿಸಿ ಚೀಲದಲ್ಲಿದ್ದ ಹಣ ಹಾಗೂ ಕಾಗದ ಪತ್ರಗಳನ್ನು ಅಲ್ಲೆ ಬಿಟ್ಟು ಹೋದ ಬಾಚಣಕಿ ಗ್ರಾಮದ ಶ್ರೀ ರೇಣುಕಾ ಮಹಿಳಾ ಸ್ವಸಹಾಯ ಸಂಘದವರಿಗೆ ಮರಳಿ ರೂ.6,200 ಹಣ ಹಾಗೂ ಕಾಗದಪತ್ರವನ್ನು ಹೊಟೇಲ ಶಂಕರ ನಾರಾಯಣದ ಮಾಲೀಕರಾದ ನಾರಾಯಣ ಉಪ್ಪುಂದ ಅವರು ನೀಡಿದ ಘಟನೆ ಸೋಮವಾರ ನಡೆದಿದೆ.

ಕಳೆದ 3-4 ತಿಂಗಳ ಹಿಂದೆ ಈ ಹಣ ಇದ್ದ ಚೀಲ ಹಾಗೂ ಕಾಗದ ಪತ್ರಗಳನ್ನು ಬಾಚಣಕಿಯ ಶ್ರೀ ರೇಣುಕಾ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಶಂಕರ ನಾರಾಯಣ ಹೊಟೇಲನಲ್ಲಿ ಉಪಹಾರ ಸೇವಿಸಿ ಹಣ ಇದ್ದ ಚೀಲ ಬಿಟ್ಟು ಹೋಗಿದ್ದರು.

ಚೀಲವನ್ನು ನೋಡಿದ ಹೊಟೇಲ ಮಾಲೀಕರು ಆಗಿನಿಂದಲೂ ಅದರ ವಿಚಾರಣೆ ನಡೆಸುತ್ತಲೇ ಇದ್ದರು. ನಿಖರವಾದ ಮಾಹಿತಿ ಸಂಗ್ರಹಿಸಿ ಹಣ ಕಳೆದುಕೊಂಡವರ ಪತ್ತೆ ಮಾಡಲಾಯಿತು. ಸೋಮವಾರ ಹಣ ಕಳೆದುಕೊಂಡ ಬಾಚಣಕಿಯ ಶ್ರೀ ರೇಣುಕಾ ಮಹಿಳಾ ಸ್ವಸಹಾಯ ಸಂಘದವರಿಗೆ ಹೊಟೇಲ ಶಂಕರ ನಾರಾಯಣ ಮಾಲೀಕರಾದ ನಾರಾಯಣ ಉಪ್ಪುಂದ ಅವರು 6,200ರೂ. ಹಣ ಹಾಗೂ ಕಾಗದ ಪತ್ರಗಳನ್ನು ನೀಡಿದರು.
ಶ್ರೀ ರೇಣುಕಾ ಮಹಿಳಾ ಸ್ವಸಹಾಯ ಸಂಘದವರು ಮಾನವೀಯತೆ ಮೆರೆದ ಹೊಟೇಲ ಶಂಕರ ನಾರಾಯಣ ಮಾಲೀಕರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹರೀಶ ನಾಯ್ಕ ಇದ್ದರು.