
ಮುಂಡಗೋಡ : ತಾಲೂಕಿನಾದ್ಯಂತ ಅನಧಿಕೃತ ಇಟ್ಟಂಗಿ ಭಟ್ಟಿಗಳ ಹಾವಳಿ ಹೆಚ್ಚಾಗಿದೆ. ತಹಶೀಲ್ದಾರರು ಅನಧಿಕೃತ ಇಟ್ಟಂಗಿ ಭಟ್ಟಿಗಳ ಮೇಲೆ ದಾಳಿ ನಡೆಸಿ ನೋಟಿಸ್ ಕೂಡ ನೀಡಿದ್ದಾರೆ.

ಈ ನಡುವೆ ಪತ್ರಕರ್ತರೊಬ್ಬರು ಸಿಕ್ಕಿದ್ದೇ ಛಾನ್ಸ್ ಎಂದುಕೊಂಡು ಅನಧಿಕೃತ ಇಟ್ಟಂಗಿಯ ಭಟ್ಟಿಗಳಿಗೆ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಪೇಪರ್ ನಲ್ಲಿ ಹಾಕಿದರೆ ನಿಮ್ಮ ಮೇಲೆ ಕೇಸ್ ಆಗುತ್ತದೆ ಎಂದು ಹೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ನಂತರ ಒಂದಲ್ಲ ಎರಡಲ್ಲಾ ಬರೋಬ್ಬರಿ 25ಸಾವಿರರೂ. ಕೇಳಿದಾಗ ಇಟ್ಟಂಗಿ ಭಟ್ಟಿ ಮಾಲೀಕರು ಹೌಹಾರಿದರು..!
ಈಗ ಇಟ್ಟಂಗಿ ಭಟ್ಟಿ ಮಾಡಿ ಲಾಭಗಳಿಸುವುದೇ ಕಷ್ಟವಾಗಿರುವಾಗ 25,000ರೂ. ಕೇಳಿದ್ದಕ್ಕೆ ಇಟ್ಟಂಗಿ ಭಟ್ಟಿ ಮಾಲೀಕರು ಹಾಗೂ ಸಾರ್ವಜನಿಕರು ಸೇರಿಕೊಂಡು ಪತ್ರಕರ್ತನಿಗೆ ಕಾತೂರನಲ್ಲಿ ಹಿಗ್ಗಾಮುಗ್ಗಾ ಥಳಿಸಿದರು.
ದಿನ ಬೆಳಗಾದರೆ ಸಾಕು, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೆದರಿಸಿ ಬ್ಲಾಕಮೇಲ್ ಮಾಡಿ ಹಣ ಹಣ ಗಳಿಸುವ ಕೆಲವು ಲುಚ್ಚಾ ಪತ್ರಕರ್ತರು ಇನ್ನಾದರೂ ಬುದ್ಧಿ ಕಲಿಯುತ್ತಾರೆಯೆ? ಎಂಬುದು ಕಾದು ನೋಡಬೇಕಾಗಿದೆ.