
ವರದಿ : ದೇವೇಂದ್ರ ನಾಯ್ಕ
ಮುಂಡಗೋಡ : ತಾಲೂಕಿನ ಬೆಡಸಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ನಡೆಯಿತು.

ನಿರ್ದೇಶಕರು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ವಿವರ ಈ ರೀತಿ ಇದೆ. ಸಾಲಗಾರರಲ್ಲದ ಸಾಮಾನ್ಯ ವರ್ಗದಿಂದ ಭಾರತಿ ರಾಘವೇಂದ್ರ ನಾಯ್ಕ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಹನುಮಂತ ಗುಡ್ಡಪ್ಪ ಕಬ್ಬೂರ, ಮಹಿಳಾ ಮೀಸಲು ಕ್ಷೇತ್ರದಿಂದ ಕಲಾವತಿ ನಾಗರಾಜ ನಾಯ್ಕ, ಹಿಂದುಳಿದ ಬ ವರ್ಗದಿಂದ ವಿನಾಯಕ ಶಿವಪ್ಪ ಗೌಡ, ಹಿಂದುಳಿದ ಅ ವರ್ಗದಿಂದ ಜೈದೇವ ಹನುಮಂತ ನಾಯ್ಕ, ಸಾಮಾನ್ಯ ವರ್ಗದಿಂದ ಮನೋಹರ ನಾರಾಯಣ ನಾಯ್ಕ, ಸಾಲಗಾರ ಸಾಮಾನ್ಯ ವರ್ಗದಿಂದ ನಾಗರಾಜ ನಾರಾಯಣ ನಾಯ್ಕ, ಸಾಮಾನ್ಯ ವರ್ಗದಿಂದ ವೆಂಕಟ ಸೋಮು ಗೌಡ, ಸಾಮಾನ್ಯ ವರ್ಗದಿಂದ ಗಂಗಾಧರ ನಿಂಗಪ್ಪ ನಾಯ್ಕ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಚುನಾವಣೆಯ ರಿಟರ್ನಿಂಗ್ ಅಧಿಕಾರಿ ರಾಘವೇಂದ್ರ ಗುಡಿಕೇರಿ ಹಾಗೂ ಬೆಡಸಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಪ್ರದೀಪ ಐ.ನಾಯ್ಕ ಹಾಗೂ ಸಿಬ್ಬಂದಿಗಳು ಇದ್ದರು.