Headlines

ತೃಪ್ತಿ ವೈನ್ ಶಾಪ್ ಮೇಲ್ಛಾವಣಿ ತೆಗೆದು ೧,೯೩,೫೦೦ರೂ. ನಗದು ಹಣ ಕಳ್ಳರು

Spread the love

ಮುಂಡಗೋಡ : ಪಟ್ಟಣದ ತೃಪ್ತಿ ವೈನ್ ಶಾಪ್‌ನ ಮೇಲ್ಛಾವಣಿಯನ್ನು ತೆಗೆದು ೧,೯೩,೫೦೦ರೂ. ನಗದು ಹಣ ಕಳ್ಳರು ದೋಚಿಕೊಂಡು ಹೋದ ಘಟನೆ ಕಳೆದ ರಾತ್ರಿ ಸಂಭವಿಸಿದೆ.

ವೈನ್ ಶಾಪ್‌ನ ಮೇಲ್ಛಾವಣಿಯ ತಗಡು ತೆಗೆದು ಅದರ ಕೆಳಗಿದ್ದ ಪಾಟಿಕಲ್ಲು ಒಡೆದು ಅದರ ಕೆಳಗೆ ಇದ್ದ ಹಲಗೆಯನ್ನು ಕಬ್ಬಿಣದ ರಾಡಿನಿಂದ ಮೀಟಿ ತೆಗೆದು ಅಂಗಡಿ ಒಳ ಹೊಕ್ಕಿ ಕಳ್ಳರು ನಗದು ಹಣ ೧,೯೩,೫೦೦ರೂ. ದೋಚಿಕೊಂಡು ಹೋಗಿದ್ದಾರೆಂದು ತೃಪ್ತಿ ವೈನ್ ಶಾಪ್‌ನವರು ಪೊಲೀಸಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಳ್ಳರ ಪತ್ತೆಗಾಗಿ ಕಾರವಾರದಿಂದ ಶ್ವಾನದಳ ಕರೆಸಲಾಗಿತ್ತು. ಈ ಬಗ್ಗೆ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.