Headlines

ನಾಳೆಯಿಂದ ‘ಶಾಲಾ-ಕಾಲೇಜು’ಗಳ ಭೌತಿಕ ತರಗತಿ ಆರಂಭ : ಈ ಹೊಸ ಗೈಡ್ ಲೈನ್ಸ್ ಪಾಲನೆ ಕಡ್ಡಾಯ

Spread the love

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯಿಂದಾಗಿ ಬಂದ್ ಆಗಿದ್ದಂತ ಶಾಲಾ-ಕಾಲೇಜುಗಳು ಆಗಸ್ಟ್.23ರ ನಾಳೆಯಿಂದ ರಾಜ್ಯದಲ್ಲಿ ಆರಂಭಗೊಳ್ಳಲಿವೆ. ನಾಳೆಯಿಂದ 9 ರಿಂದ 12ನೇ ತರಗತಿಗೆ ಭೌತಿಕ ತರಗತಿಗಳು ಆರಂಭಗೊಳ್ಳಲಿದ್ದು, ಶಾಲಾ ಕಾಲೇಜುಗಳು ಈ ಹೊಸ ಗೈಡ್ ಲೈನ್ ಪಾಲನೆ ಕಡ್ಡಾಯವಾಗಿದೆ.

ಹೌದು.. ನಾಳೆಯಿಂದ ರಾಜ್ಯಾದ್ಯಂತ 9 ರಿಂದ 12ನೇ ತರಗತಿಯ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಳ್ಳಲಿವೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿರುವಂತ ಶಾಲಾ-ಕಾಲೇಜುಗಳು, ಮಕ್ಕಳ ಬರುವಿಕೆಗಾಗಿ ಸ್ವಾಗತ ಕೋರೋದಕ್ಕೆ ಸಜ್ಜುಗೊಂಡಿವೆ.

ರಾಜ್ಯದ 9 ರಿಂದ 12ನೇ ತರಗತಿಗಳ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಆಗಮನದ ನಿರೀಕ್ಷೆಗಾಗಿ ಶಾಲೆಗಳನ್ನು ಸಿದ್ಧಗೊಳಿಸಲಾಗಿದ್ದು, ಅಂತಿಮ ಹಂತದಲ್ಲಿ ಶಾಲಾ-ಕಾಲೇಜುಗಳ ಕೊಠಡಿಗಳನ್ನು ಸ್ಯಾನಿಟೈಸ್ ಮಾಡೋದು, ಸ್ವಚ್ಛತೆ ಮಾಡೋ ಕಾರ್ಯದಲ್ಲೂ ಕೆಲವೆಡೆ ಸಿಬ್ಬಂದಿಗಳು ನಿರತರಾಗಿದ್ದಾರೆ.

ಇನ್ನೂ ನಾಳೆಯಿಂದ ಕೊರೋನಾ ನಂತ್ರ ಆರಂಭಗೊಳ್ಳುತ್ತಿರುವಂತ ಭೌತಿಕ ತರಗತಿಗಳಿಗೆ ಬನ್ನಿ ಮಕ್ಕಳೇ ಮರಳಿ ಶಾಲೆಗೆ, ಸುರಕ್ಷತೆ ಜವಾಬ್ದಾರಿ ನಮ್ಮದು ಅಂತ ಟ್ಯಾಗ್ ಲೈನ್ ಮೂಲಕ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳ ಬರ ಮಾಡಿಕೊಳ್ಳುತ್ತಿವೆ.

ಹಾಗಾದ್ರೇ.. ಶಾಲೆಗಳ ಆರಂಭಕ್ಕೆ ಇರೋ ಗೈಡ್ ಲೈನ್ಸ್ ಏನು ಗೊತ್ತಾ.?

  • ನಾಳೆ ಶಾಲಾ-ಕಾಲೇಜುಗಳ ತರಗತಿಗೆ ಹಾಜರಾಗುವಂತ ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆ ಪತ್ರ ತರೋದು ಕಡ್ಡಾಯ
  • ಕೊರೋನಾ ಲಕ್ಷಣವಿರೋ ಮಕ್ಕಳಿಗೆ ಶಾಲಾ ಪ್ರವೇಶಕ್ಕೆ ಅವಕಾಶ ಇಲ್ಲ
  • 2ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರೋ ಜಿಲ್ಲೆಗಳಲ್ಲಿ ಶಾಲೆಗಳು ಓಪನ್ ಇಲ್ಲಯ
  • ಶಾಲಾ-ಕಾಲೇಜು ಆರಂಭದ ನಂತ್ರ 2ಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೋನಾ ಸೋಂಕು ತಗುಲಿದ್ರೇ.. ಒಂದು ವಾರ ಶಾಲೆ ಸೀಲ್ ಡೌನ್.
  • ಶಾಲಾ-ಕಾಲೇಜಿನ ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿಗೆ ಹಾಜರಾಗಲು ಅವಕಾಶ
  • ಮಾಸ್ಕ್, ಸಾಮಾಜಿಕ ಅಂತರ, ಸ್ವಚ್ಛತೆಯ ಕಾಯ್ದುಕೊಳ್ಳೋದು ಕಡ್ಡಾಯ
  • ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಹೋಗೋ ವಿದ್ಯಾರ್ಥಿಗಳಿಗೆ 72 ಗಂಟೆ ಒಳಗಿನ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು
  • ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು ಕೊರೋನಾ ಲಸಿಕೆ ಪಡೆದಿರೋದು ಕಡ್ಡಾಯ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ರೇ.. ಮಾತ್ರ ಶಾಲಾ-ಕಾಲೇಜಿಗೆ ಬರೋದಕ್ಕೆ ಅವಕಾಶ
  • ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ.
  • ವಿದ್ಯಾರ್ಥಿಗಳು ಆನ್ ಲೈನ್ ಹಾಗೂ ಆಫ್ ಲೈನ್ ತರಗತಿಗಳ ಮೂಲಕವೂ ಕಲಿಕೆ ಮುಂದುವರೆಸಬಹುದು.
  • ಶಾಲಾ – ಕಾಲೇಜು ಆವರಣ, ಕೊಠಡಿಗಳ ಸಂಪೂರ್ಣ ಸ್ಯಾನಿಟೈರ್ಸ್ ಮಾಡೋದು ಕಡ್ಡಾಯ
  • ವಿದ್ಯಾರ್ಥಿಗಳೇ ಊಟ, ಕುಡಿಯೋ ನೀರು ತರೋದಕ್ಕೆ ಸೂಚನೆ

ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್, ಶಾಲಾ ಶುಲ್ಕ ಪಾವತಿ ರಸೀದಿ ತೋರಿಸಿ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ನಾಳೆಯಿಂದ ಆರಂಭಗೊಳ್ಳುತ್ತಿರುವಂತ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಈ ಹಿಂದಿನ ಪಾಸ್ ಅವಧಿ ಮುಕ್ತಾಯಗೊಂಡಿದ್ದರೂ, ತಮ್ಮ ಐಡಿಕಾರ್ಡ್, ಶಾಲೆಗೆ ದಾಖಲಾದ ಶುಲ್ಕ ಸಂದಾಯ ರಸೀದಿ ತೋರಿಸಿ, ಸಾರಿಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡೋದಕ್ಕೆ ಅವಕಾಶ ಕಲ್ಪಿಸಲಾಗಿದೆ.