ಕಾಬೂಲ್ ರಸ್ತೆಗಳಲ್ಲಿ ಓಡ್ತಿದ್ದ ನಿರ್ಮಾಪಕಿ ವಿಡಿಯೋ ವೈರಲ್

Spread the love

ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಶುರುವಾಗ್ತಿದ್ದಂತೆ, ಮಹಿಳೆಯರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಪ್ರಸಿದ್ಧ ಅಫ್ಘಾನ್ ಚಲನಚಿತ್ರ ನಿರ್ಮಾಪಕಿ ಸಹಾರಾ ಕರಿಮಿ ವಿಡಿಯೋವೊಂದು ಈ ಸಂದರ್ಭದಲ್ಲಿ ವೈರಲ್ ಆಗಿದೆ. ಸಹಾರಾ, ಕಾಬೂಲ್ ಬೀದಿಗಳಲ್ಲಿ ಓಡುತ್ತಿದ್ದಾರೆ.

ಸಹಾರಾ ಕರಿಮಿ, ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಹಾರಾ, ಕಾಬೂಲ್‌ನ ಬೀದಿಗಳಲ್ಲಿ ಓಡುತ್ತಿದ್ದಾರೆ. ಈ ವಿಡಿಯೋ ಮೂಲಕ ಅಲ್ಲಿನ ಮಹಿಳೆಯರ ಸ್ಥಿತಿ ಹೇಳಲು ಸಹಾರಾ ಪ್ರಯತ್ನಿಸುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕಿ, ಹಣ ವಿತ್ ಡ್ರಾ ಮಾಡಲು ಬ್ಯಾಂಕ್ ಗೆ ಹೋಗಿದ್ದರಂತೆ. ಬಹಳ ಸಮಯ ಕಾಯುತ್ತಿದ್ದರೂ ಹಣ ಸಿಗಲಿಲ್ಲವಂತೆ. ಇದ್ದಕ್ಕಿದ್ದಂತೆ ಗುಂಡುಗಳ ಸದ್ದು ಕೇಳಿತ್ತಂತೆ. ಬ್ಯಾಂಕ್ ಮ್ಯಾನೇಜರ್, ಅಲ್ಲಿಂದ ಹೋಗುವಂತೆ ಹೇಳಿದ್ದರಂತೆ.

ತಾಲಿಬಾನಿಗಳು ಬಹಳ ಹತ್ತಿರ ಬಂದಿದ್ದಾರೆ ಎಂದು ಮ್ಯಾನೇಜರ್ ಹೇಳಿದ್ದರು. ಬ್ಯಾಂಕ್ ಮ್ಯಾನೇಜರ್ ಹಿಂಬಾಗಿಲನ್ನು ತೆರೆದು ನನ್ನನ್ನು ಹೊರಗೆ ಕಳುಹಿಸಿದ್ರು. ನಾನು ಓಡಿ ಹೋದೆ ಎಂದು ಅವರು ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ಬಂದ ಅದೃಷ್ಟವಂತರಲ್ಲಿ ಕರಿಮಿ ಒಬ್ಬರು. ಅವರೀಗ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿದ್ದಾರೆ.