ರಾಜ್ಯದಲ್ಲಿ 1 ರಿಂದ 5 ನೇ ತರಗತಿ ಆರಂಭದ ಕುರಿತಂತೆ ಸಿಎಂ ‘ಬಸವರಾಜ ಬೊಮ್ಮಾಯಿ’ ಮುಖ್ಯ ಮಾಹಿತಿ

Spread the love

ಬೆಂಗಳೂರು : ರಾಜ್ಯದಲ್ಲಿ 1 ರಿಂದ 5 ನೇ ತರಗತಿ ಆರಂಭದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಚರ್ಚೆ ನಡೆದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಮಾಹಿತಿ ನೀಡಿದ್ದು, ತಜ್ಞರ ಜೊತೆ ಚರ್ಚೆ ಮಾಡಿದ ಬಳಿಕ ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಶಾಲೆ ಆರಂಭಿಸುವ ಬಗ್ಗೆ ಇನ್ನೂ ಯಾವುದೇ ರೀತಿಯ ಚರ್ಚೆ ನಡೆದಿಲ್ಲ, ತಜ್ಞರು ಕೂಡ ಶಾಲೆ ಆರಂಭಿಸುವ ಕುರಿತು ಯಾವುದೇ ಸಲಹೆ ನೀಡಿಲ್ಲ ಎಂದು ಹೇಳಿದರು.

ಇನ್ನೂ. ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ 1-5 ರಿಂದ ತರಗತಿ ಆರಂಭಿಸುವ ಕುರಿತು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಒಪ್ಪಿಗೆ ಕಡ್ಡಾಯಬೇಕು. ಹೀಗಾಗಿ ತಜ್ಞರ ಸಮಿತಿ ಸಲಹೆ ಪಡೆದು ಶಾಲೆ ಆರಂಭದ ಕುರಿತು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಕಂಡುಬರುತ್ತಿರುವುದರಿಂದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಇನ್ನೂ ಸ್ವಲ್ಪ ಕಾಯಿರಿ ಎಂದು ಹೇಳಿದ್ದಾರೆ. ಹೀಗಾಗಿ ತಜ್ಞರ ಜೊತೆ ಚರ್ಚೆ ಮಾಡಿ ಒಪ್ಪಿಗೆ ಪಡೆದು ಶಾಲೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.